HomeLatest NewsBIG NEWS : ಕರ್ನಾಟಕ UG-CET ಫಲಿತಾಂಶ ಪ್ರಕಟ ; ಬೆಂಗಳೂರಿನ RV ಕಾಲೇಜಿನ ವಿದ್ಯಾರ್ಥಿನಿ...

BIG NEWS : ಕರ್ನಾಟಕ UG-CET ಫಲಿತಾಂಶ ಪ್ರಕಟ ; ಬೆಂಗಳೂರಿನ RV ಕಾಲೇಜಿನ ವಿದ್ಯಾರ್ಥಿನಿ ತನಿಷಾ ರಾಜ್ಯಕ್ಕೆ ಟಾಪರ್.!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ನೇ ಸಾಲಿನ ಯುಜಿಸಿಇಟಿ (UG CET) ಫಲಿತಾಂಶವನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್  (1st Rank) ಪಡೆದು ಸಾಧನೆಗೈದಿದ್ದಾರೆ.

ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಎದುರಿಸಿದ್ದ ಈ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಲ್ಲಿ, ತನಿಷಾ ಕಾರ್ತಿಕ್ ತಮ್ಮ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಈ ಸಾಧನೆಯು ಅವರ ಕುಟುಂಬ, ಶಿಕ್ಷಕರು ಹಾಗೂ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಹರ್ಷವನ್ನು ಮೂಡಿಸಿದೆ.

ಫಲಿತಾಂಶ ಪರಿಶೀಲನೆ: ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಕೆಇಎ (KEA) ಅಧಿಕೃತ ವೆಬ್‌ಸೈಟ್ cetonline.karnataka.gov.in ಅಥವಾ kea.kar.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ರ‍್ಯಾಂಕ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಾದ್ಯಂತ ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ಪರೀಕ್ಷೆಯನ್ನು ಬರೆದಿದ್ದರು. ಪ್ರಥಮ ರ್ಯಾಂಕ್  ಪಡೆದ ತನಿಷಾ ಕಾರ್ತಿಕ್ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ರಾಜ್ಯದ ವಿವಿಧ ಶೈಕ್ಷಣಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಅವರ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ:

ಇಂಜಿನಿಯರಿಂಗ್ ವಿಭಾಗ:

  • ತನಿಷಾ ಕಾರ್ತಿಕ್ (ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು) – 99.44%
  • ಸೃಜನ್ ಬಿ.ಎಸ್ (ಕೆ.ಎಂ.ಡಬ್ಲ್ಯೂ.ಎ ಪಿಯು ಕಾಲೇಜು, ಬೆಂಗಳೂರು) – 99.16%
  • ನಿನಾದ ವಸಿಷ್ಠ (ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು) – 98.88%

ವೆಟರಿನರಿ, ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ ಮತ್ತು ಫಾರ್ಮಾ-ಡಿ ವಿಭಾಗಗಳು:

  • ಈ ಎಲ್ಲಾ ವಿಭಾಗಗಳಲ್ಲಿ ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ನಯನಾ ಗೋಪಿ ಮತ್ತು ದಾವಣಗೆರೆಯ ಸರ್ ಎಂ.ವಿ. ಪಿಯು ಕಾಲೇಜಿನ ಅಮೂಲ್ಯ ಎಸ್. ಅವರು ತಲಾ 100% ಅಂಕಗಳೊಂದಿಗೆ ಜಂಟಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕೃಷಿ ವಿಜ್ಞಾನ (Farm Sciences) ವಿಭಾಗ:

  • ನಿನಾದ ವಸಿಷ್ಠ (ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು) – 98.75%
  • ಅನ್ಮೋಲ್ ಪ್ರಭು (ಅರ್ಜುನ ಸೈನ್ಸ್ ಪಿಯು ಕಾಲೇಜು, ಧಾರವಾಡ) – 98.58%
  • ಸಮಯ್ ಎ. ಎಸ್ (ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು) – 98.41%

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular