ನಟಿ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಹಾರರ್ ಥ್ರಿಲ್ಲರ್ ಸಿನಿಮಾ ‘418’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆಯಾದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಈಗಾಗಲೇ ಬ್ರೇಕ್ ಇವನ್ (ಲಾಭದ ಹಂತ) ತಲುಪಿದೆ ಎಂದು ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೇವಲ BookMyShow ಆ್ಯಪ್‌ನಲ್ಲಿಯೇ ಬರೋಬ್ಬರಿ 46,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಬಿಡುಗಡೆಯಾದ ಮೂರನೇ ದಿನದಲ್ಲಿ ಈ ಪ್ರಮಾಣದ ಟಿಕೆಟ್‌ಗಳು ಬುಕ್ ಆಗುತ್ತಿರುವುದು ಚಿತ್ರತಂಡಕ್ಕೆ ಹೊಸ ಭರವಸೆ ಮೂಡಿಸಿದೆ. ಚಿತ್ರವು ಪ್ರಪಂಚದಾದ್ಯಂತ ಸುಮಾರು Rs 7 ಕೋಟಿಗೂ ಹೆಚ್ಚು ಗಳಿಕೆ ಕಾಣಬಹುದು ಎಂದು ಅಂದಾಜಿಸಲಾಗಿದ್ದರೂ, ಅಧಿಕೃತ ಕಲೆಕ್ಷನ್ ಮೊತ್ತವನ್ನು ಚಿತ್ರತಂಡ ಇನ್ನು ಬಹಿರಂಗಪಡಿಸಬೇಕಿದೆ.
ಈ ಚಿತ್ರದಲ್ಲಿ ಸೂರ್ಯ ರಾಜ್ ವೀರಬತ್ತಿನಿ, ಪ್ರೀತಿ ಪಗಡಾಲ, ಚರಣ್ ಲಕ್ಕರಾಜು ಸೇರಿದಂತೆ ಪ್ರಮುಖ ತಾರಾಗಣ ಅಭಿನಯಿಸಿದ್ದಾರೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅರ್ಪಣೆಯಲ್ಲಿ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ.

