HomeEntertainmentಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟುಹಬ್ಬ: ಪೋಷಕ ನಟನಿಂದ ಗ್ಲೋಬಲ್ ಸ್ಟಾರ್ ಆಗಿ ಬದಲಾದ ರೋಚಕ...

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟುಹಬ್ಬ: ಪೋಷಕ ನಟನಿಂದ ಗ್ಲೋಬಲ್ ಸ್ಟಾರ್ ಆಗಿ ಬದಲಾದ ರೋಚಕ ಕಥೆ.

ಬೆಂಗಳೂರು: ಇಂದು (ಜುಲೈ 7) ಕನ್ನಡ ಚಿತ್ರರಂಗದ ಹೆಮ್ಮೆಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಜನ್ಮದಿನ. ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸ್ ಮತ್ತು ಕಾಂತಾರ ಚಾಪ್ಟರ್ 1 ಚಿತ್ರದ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ರಿಷಬ್, ಇಂದು ಭಾರತೀಯ ಚಿತ್ರರಂಗದ ಮಂಚೂಣಿಯ ಹೆಸರಾಗಿ ಬೆಳೆದು ನಿಂತಿದ್ದಾರೆ. ಆದರೆ, ಈ ತಾರಾಪಟ್ಟದ ಹಿಂದಿರುವುದು ಯಾರೂ ಊಹಿಸಲಾಗದ ಕಠಿಣ ಪರಿಶ್ರಮ ಮತ್ತು ವರ್ಷಗಳ ಹೋರಾಟದ ಕಥೆ

ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ರಿಷಬ್ ಶೆಟ್ಟಿ ಆರಂಭದ ದಿನಗಳಲ್ಲಿ ಸಾಕಷ್ಟು ವಿಭಿನ್ನ ಕೆಲಸಗಳನ್ನು ಮಾಡಿದ್ದರು. ನಟನೆಯ ಆಸಕ್ತಿಯಿಂದ ಗಾಂಧಿನಗರಕ್ಕೆ ಬಂದ ಅವರಿಗೆ ಮೊದಲು ‘ತುಘಲಕ್’ ಸಿನಿಮಾದಲ್ಲಿ ವಿಲನ್ ಪಾತ್ರ ಸಿಕ್ಕಿತ್ತು. ಅದೇ ಚಿತ್ರದ ವೇಳೆ ಅವರಿಗೆ ರಕ್ಷಿತ್ ಶೆಟ್ಟಿ ಎಂಬ ಜೀವದ ಗೆಳೆಯನ ಪರಿಚಯವಾಯಿತು.

ಆ ನಂತರ, 2013ರಲ್ಲಿ ತೆರೆಕಂಡು ಹೊಸ ಅಲೆ ಸೃಷ್ಟಿಸಿದ್ದ ಪವನ್ ಕುಮಾರ್ ನಿರ್ದೇಶನದ, ನೀನಾಸಂ ಸತೀಶ್ ನಾಯಕನಾಗಿದ್ದ ಸೂಪರ್ ಹೂಟ್ ‘ಲೂಸಿಯಾ’ ಚಿತ್ರದಲ್ಲಿ ರಿಷಬ್ ಒಂದು ಸಣ್ಣ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆ ಚಿತ್ರದ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಅಂದು ಸಣ್ಣ ಪಾತ್ರ ಮಾಡಿದ್ದ ನಟ ಇಂದು ಜಾಗತಿಕ ಮಟ್ಟದ ಸ್ಟಾರ್ ಆಗಿ ಬೆಳೆದಿರುವುದನ್ನು ನೋಡಿ ನೆಟ್ಟಿಗರು ಹಾಗೂ ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೀ ಪೌಡರ್ ಮಾರಾಟದಿಂದ ಹೋಟೆಲ್ ಲಾಸ್‌ವರೆಗೆ

ರಿಷಬ್ ಶೆಟ್ಟಿ ಅವರ ಲೈಫ್ ಜರ್ನಿ ಸುಲಭದ್ದಾಗಿರಲಿಲ್ಲ. ಜೀವನೋಪಾಯಕ್ಕಾಗಿ ಅವರು ಒಂದು ಕಾಲದಲ್ಲಿ ಚಹಾ ಪುಡಿ ಮತ್ತು ನೀರಿನ ಬಾಟಲಿಗಳನ್ನು (Water Cans) ಮಾರಾಟ ಮಾಡಿದ್ದರು. ಮುಂಬೈನಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ನಿರ್ಮಾಣ ಸಂಸ್ಥೆಯೊಂದರಲ್ಲಿ ಆಫೀಸ್ ಅಸಿಸ್ಟೆಂಟ್ ಆಗಿ ಹಾಗೂ ನಂತರ ಅಂಧೇರಿಯಲ್ಲಿ ಚಲನಚಿತ್ರ ನಿರ್ಮಾಪಕರೊಬ್ಬರಿಗೆ ಚಾಲಕರಾಗಿ (Driver) ಕೆಲಸ ಮಾಡಿದ್ದರು.

ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ (GFTI) ಸಿನಿಮಾ ಅಧ್ಯಯನ ಮಾಡುವಾಗ, ಅವರಿಗೆ ಕರಾವಳಿಯ ಸಾಂಪ್ರದಾಯಿಕ ಜಾನಪದ ರಂಗಭೂಮಿಯಾದ ಯಕ್ಷಗಾನದೊಂದಿಗೆ ಸಂಪರ್ಕ ಬೆಳೆಯಿತು. ಇದೇ ಯಕ್ಷಗಾನವು ಅವರನ್ನು ಅಂತಿಮವಾಗಿ ಕಾಂತಾರ ನಿರ್ಮಾಣಕ್ಕೆ ಪ್ರೇರೇಪಿಸಿತು. ವಾಟರ್ ಕ್ಯಾನ್ ಬ್ಯುಸಿನೆಸ್‌ನಲ್ಲಿ ಗಳಿಸಿದ ಹಣವನ್ನು ಹೋಟೆಲ್ ವ್ಯವಹಾರಕ್ಕೆ ಸುರಿದು, ಮೂರೇ ತಿಂಗಳಲ್ಲಿ ಭಾರಿ ನಷ್ಟ ಅನುಭವಿಸಿ ಲಕ್ಷಾಂತರ ರೂಪಾಯಿ ಸಾಲದ ಹೊರೆಯನ್ನು ಸಹ ಅವರು ಹೊತ್ತಿದ್ದರು. ಆ ಬಳಿಕ ಅಟ್ಟಹಾಸ ಲೂಸಿಯಾ ನಂತರ 2014ರಲ್ಲಿ ಬಂದ ‘ಉಳಿದವರು ಕಂಡಂತೆ’ ಸಿನಿಮಾ ಅವರ ಜರ್ನಿಗೆ ದೊಡ್ಡ ತಿರುವು ನೀಡಿತು.

ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ: ಚಾಪ್ಟರ್ 1 ಹೊಸ ಇತಿಹಾಸ

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಅತ್ಯಂತ ಅದ್ದೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಭಾಗಕ್ಕಿಂತಲೂ ಮಿಗಿಲಾದ ಮೇಕಿಂಗ್ ಹೊಂದಿದ್ದ ಈ ಪ್ರಿಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ನಾಯಕಿ ರುಕ್ಮಿಣಿ ವಸಂತ್ ಅವರ ನಟನೆ ಪ್ರೇಕ್ಷಕರನ್ನು ಮೈರೋಮಾಂಚನಗೊಳಿಸಿದೆ.

ಸಕ್ನಿಲ್ಕ್ ಪ್ರಕಾರ, ಈ ಚಿತ್ರವು ತನ್ನ ಮೊದಲ ದಿನದಂದೇ ಜಾಗತಿಕ ಮಟ್ಟದಲ್ಲಿ ಭಾರಿ ಕಲೆಕ್ಷನ್ ಮಾಡಿದೆ:

ಪ್ರದರ್ಶನಗಳು: ಮೊದಲ ದಿನ ಒಟ್ಟು 19,621 ಶೋಗಳು ಪ್ರದರ್ಶನ ಕಂಡಿವೆ.

ಭಾರತದ ಗಳಿಕೆ: ಭಾರತದಲ್ಲಿ ಕೇವಲ ಒಂದೇ ದಿನಕ್ಕೆ 61.85 ಕೋಟಿ ರೂ. ನಿವ್ವಳ (Net) ಕಲೆಕ್ಷನ್ ಆಗಿದ್ದು, ಒಟ್ಟು (Gross) ಕಲೆಕ್ಷನ್ 73.29 ಕೋಟಿ ರೂ. ತಲುಪಿದೆ.

ವಿದೇಶಿ ಗಳಿಕೆ: ವಿದೇಶಗಳಲ್ಲಿ ಮೊದಲ ದಿನವೇ 13.50 ಕೋಟಿ ರೂ. ಕಲೆಕ್ಷನ್ ಮಾಡಿದೆ.

ವಿಶ್ವದಾದ್ಯಂತ ಒಟ್ಟು ಗಳಿಕೆ: ಕೇವಲ ಒಂದೇ ದಿನದಲ್ಲಿ ವಿಶ್ವಾದ್ಯಂತ ಬರೋಬ್ಬರಿ 86.79 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.

ವೈಯಕ್ತಿಕ ಬದುಕು ಮತ್ತು ಭವಿಷ್ಯದ ಬೃಹತ್ ಯೋಜನೆಗಳು:

ರಿಷಬ್ 2017 ರಲ್ಲಿ ಪ್ರಗತಿ ಶೆಟ್ಟಿ ಅವರನ್ನು ಸಾಂಪ್ರದಾಯಿಕ ಬಂಟ್ ಶೈಲಿಯಲ್ಲಿ ವಿವಾಹವಾದರು. ಪ್ರಗತಿ ಅವರು ಕಾಂತಾರ ಫ್ರಾಂಚೈಸ್‌ಗೆ ಫ್ಯಾಷನ್ ಸ್ಟೈಲಿಸ್ಟ್ ಆಗಿ ಸೃಜನಾತ್ಮಕ ಕೊಡುಗೆ ನೀಡಿದ್ದಾರೆ. ಈ ದಂಪತಿಗೆ ರಣವಿತ್ ಮತ್ತು ರಾಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಕಾಂತಾರ ಚಾಪ್ಟರ್ 2: ಪ್ರಸ್ತುತ ತಮ್ಮದೇ ನಿರ್ದೇಶನದ ‘ಕಾಂತಾರ ಚಾಪ್ಟರ್ 2’ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ರಂಡಮೂಳಂ: ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವನಾಯರ್ ಅವರ ‘ರಂಡಮೂಳಂ’ ಕೃತಿಯನ್ನು ತಮ್ಮ ‘ಮ್ಯಾಗ್ನಂ ಓಪಸ್’ ಸಿನಿಮಾ ಆಗಿ ತೆರೆಗೆ ತರಲು ಅವರ ತಂಡ ಸಂಶೋಧನಾ ಕೆಲಸದಲ್ಲಿ ತೊಡಗಿದೆ.

ಜೈ ಹನುಮಾನ್: ಪ್ರಶಾಂತ್ ವರ್ಮ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾದಲ್ಲಿ ಅವರು ಕೇವಲ ನಟನೆಯಷ್ಟೇ ಮಾಡುತ್ತಿದ್ದು, ಬಿಡುವಿನ ವೇಳೆಯಲ್ಲಿ ಹೊಸ ಕಂಟೆಂಟ್ ಇರುವ ಸಿನಿಮಾಗಳ ನಿರ್ಮಾಣದ ಯೋಜನೆಯನ್ನೂ ಹೊಂದಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular