HomeLatest NewsBIG NEWS: ಜಪಾನ್ ಹಿಂದಿಕ್ಕಿದ ಭಾರತ: ಅಮೆರಿಕ, ಚೀನಾ ನಂತರ 3ನೇ ಬಲಿಷ್ಠ ದೇಶ: ಏಷ್ಯಾದ...

BIG NEWS: ಜಪಾನ್ ಹಿಂದಿಕ್ಕಿದ ಭಾರತ: ಅಮೆರಿಕ, ಚೀನಾ ನಂತರ 3ನೇ ಬಲಿಷ್ಠ ದೇಶ: ಏಷ್ಯಾದ ‘ಮೇಜರ್ ಪವರ್’ ಪಟ್ಟಕ್ಕೆ ಭಾಜನ

ನವದೆಹಲಿ: ಏಷ್ಯಾ ಪವರ್ ಇಂಡೆಕ್ಸ್ -2025 ರಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದೆ. ಈ ಮೂಲಕ ಮೇಜರ್ ಪವರ್ ಎಂಬ ಪಟ್ಟಣಕ್ಕೆ ಭಾಜನವಾಗಿದೆ.

ಈ ಬಾರಿ ಜಪಾನ್ ಅನ್ನು ಹಿಂದಿಕ್ಕಿ 40 ಅಂಕಗಳನ್ನು ಭಾರತ ಪಡೆದುಕೊಂಡಿದ್ದು, ಅಮೆರಿಕ ಹಾಗೂ ಚೀನಾ ನಂತರದ ಸ್ಥಾನದಲ್ಲಿದೆ. 40 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆಯುವುದು ಮೇಜರ್ ಪರ್ವ ಪಟ್ಟಕ್ಕೆ ಮಾನದಂಡವಾಗಿದೆ. ಏಷ್ಯಾ ಖಂಡದ ದೇಶಗಳ ಮೇಲೆ ಪ್ರಭಾವ ಬೀರುವ ರಾಷ್ಟ್ರಗಳ ಸೇನಾ ಸಾಮರ್ಥ್ಯ, ಆರ್ಥಿಕತೆ, ರಾಜತಾಂತ್ರಿಕ ಬಲ, ಭವಿಷ್ಯದ ಸಂಪನ್ಮೂಲ, ಸಂಸ್ಕೃತಿ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ಆಸ್ಟ್ರೇಲಿಯಾ ಮೂಲದ ಚಿಂತಕರ ಚಾವಡಿ ಲೋವಿ ಇನ್ಸ್ಟಿಟ್ಯೂಟ್ ಈ ವರದಿಯನ್ನು ಸಿದ್ಧಪಡಿಸಿದೆ.

ಮಿಲಿಟರಿ ಶಕ್ತಿ ಮತ್ತು ಆರ್ಥಿಕ ಬೆಳವಣಿಗೆಯ ಆಧಾರದ ಮೇಲೆ ಭಾರತವು ಏಷ್ಯಾ ಶಕ್ತಿ ಸೂಚ್ಯಂಕ 2025 ರಲ್ಲಿ ಮೂರನೇ ಸ್ಥಾನದಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಪರೇಷನ್ ಸಿಂಧೂರ್ ಸಮಯದಲ್ಲಿ ಸ್ಪಷ್ಟವಾದ ಆರ್ಥಿಕ ಬೆಳವಣಿಗೆ ಮತ್ತು ಮಿಲಿಟರಿ ಸಾಮರ್ಥ್ಯದಿಂದ ಉತ್ಸುಕರಾಗಿರುವ ಭಾರತವು ಏಷ್ಯನ್ ಶಕ್ತಿ ಸೂಚ್ಯಂಕ 2025 ರಲ್ಲಿ “ಪ್ರಮುಖ ಶಕ್ತಿ” ಸ್ಥಾನಮಾನವನ್ನು ಸಾಧಿಸಿದೆ, ಇದು ಅಮೆರಿಕ ಮತ್ತು ಚೀನಾದ ನಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಜಾಗತಿಕ ಚಿಂತಕರ ಚಾವಡಿ ತನ್ನ ವರದಿಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾ ಮೂಲದ ಚಿಂತಕರ ಚಾವಡಿ ಲೋವಿ ಇನ್ಸ್ಟಿಟ್ಯೂಟ್ ಶುಕ್ರವಾರ ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. 2025 ರ ಒಟ್ಟಾರೆ ಶಕ್ತಿಯ ಅಗ್ರ ಐದು ದೇಶಗಳು ಯುನೈಟೆಡ್ ಸ್ಟೇಟ್ಸ್, ಚೀನಾ, ಭಾರತ, ಜಪಾನ್ ಮತ್ತು ರಷ್ಯಾ. ಆಸ್ಟ್ರೇಲಿಯಾ ಒಂದು ಸ್ಥಾನ ಕುಸಿದು ಆರನೇ ಸ್ಥಾನಕ್ಕೆ ಕುಸಿದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular