HomeKarnatakaಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಯೋಜನೆಯಡಿ 2026ರ ಅಕ್ಟೋಬರ್ ಮಾಹೆಯ ಅಕ್ಕಿ ಮತ್ತು ರಾಗಿ ಉಚಿತವಾಗಿ ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ.

ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿಗೆ 14 ಕೆಜಿ ಅಕ್ಕಿ ಮತ್ತು 21 ಕೆಜಿ ರಾಗಿಯನ್ನು ನೀಡಲಾಗುವುದು. ಆದ್ಯತಾ ವಲಯದ ಕೇಂದ್ರ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ 02 ಕೆ.ಜಿ. ಅಕ್ಕಿ ಮತ್ತು 03 ಕೆಜಿ ರಾಗಿಯನ್ನು ನೀಡಲಾಗುವುದು. ಆದ್ಯತಾ ವಲಯದ ರಾಜ್ಯ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಅನ್ನ ಯೋಜನೆಯಡಿ 4 ಸದಸ್ಯರ ಮೇಲ್ಪಟ್ಟು ಪ್ರತಿ ಸದಸ್ಯರಿಗೆ 05 ಕೆಜಿ ಅಕ್ಕಿ ನೀಡಲಾಗುವುದು. ಆದ್ಯತಾ ವಲಯದ ಅನ್ನಭಾಗ್ಯ ಯೋಜನೆ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 05 ಕೆಜಿ ಅಕ್ಕಿಯನ್ನು ನೀಡಲಾಗುವುದು

ಪಡಿತರ ಚೀಟಿದಾರರು ಆಹಾರ ಧಾನ್ಯವನ್ನು ಪಡೆಯುವಾಗ ಕಡ್ಡಾಯವಾಗಿ ಬಯೋ ನೀಡಿ ಪಡಿತರ ಪಡೆಯುವುದು. ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ವಿತರಣೆಗೆ ಸರ್ವರ್ ಲಭ್ಯಗೊಳಿಸಿರುವುದರಿಂದ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋ ನೀಡಿ ಪಡಿತರ ಪಡೆಯುವುದು. ಪಡಿತರ ವಿತರಣೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಕೇಂದ್ರ ಸಹಾಯವಾಣಿ 1967 ಕ್ಕೆ ಕರೆ ಮಾಡಿ ಅಥವಾ ಹತ್ತಿರದ ಆಹಾರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ. (ಚಿತ್ರಕೃಪೆ-ಎಐ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಸ್ಕಾಂ ಪಿ.ಎಂ. ಸೂರ್ಯ ಘರ್ ಮುಫ್ ಬಿಜ್ಲಿ; ಅರ್ಜಿ ಸಲ್ಲಿಸಲು ಸೇವಾಸೇತು ಶಿಬಿರ ಆರಂಭ

ಶಿವಮೊಗ್ಗ; ಭಾರತ ಸರ್ಕಾರದ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ನಿರ್ದೇಶನದಂತೆ, ಪಿ ಎಂ ಸೂರ್ಯ ಘರ್ ಮುಫ್ ಬಿಜ್ಲಿ ಯೋಜನೆಯ ಪ್ರಯೋಜನಗಳನ್ನು ಗಮನಹರಿಸಿದ ಜಾಗೃತಿ, ಸಂಪರ್ಕ ಅಭಿಯಾನ, ನೋಂದಣಿ ಮತ್ತು ಸಹಾಯ ಸೌಲಭ್ಯಗಳ ಮೂಲಕ ಕಟ್ಟಕಡೆಯ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸೇವಾಸೇತು ಶಿಬಿರಗಳನ್ನು ಆಯೋಜಿಸಲಾಗಿದೆ.

ದಿನಾಂಕ:-13.10.2026 ರಿಂದ ದಿನಾಂಕ:15.10.2026 ರವರೆಗೆ ನಗರ ಉಪ ವಿಭಾಗ-3, ಮೆಸ್ಕಾಂ, ಶಿವಮೊಗ್ಗ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲು ಬೆಳಿಗ್ಗೆ 10.00 ರಿಂದ ಸಂಜೆ 6.00ರವರೆಗೆ ನಗರ ಉಪ ವಿಭಾಗ-3, ಮೆಸ್ಕಾಂ, ಗುಡ್‌ಲಕ್ ವೃತ್ತದ ಹತ್ತಿರ, ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಇಲ್ಲಿ ಕೆಲಸ ನಿರ್ವಹಿಸಲಾಗುವುದು.

ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60ಅಡಿ ರಸ್ತೆ, ಜೈಲ್ ಸರ್ಕಲ್, ಆಟೋಕಾಂಪ್ಲೆಕ್ಸ್, ಪೋಲೀಸ್ ಚೌಕಿ, ಮೇಧಾರ ಕೇರಿ, ನರಸಿಂಹ ಬಡಾವಣೆ, ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟ್ಮೆಂಟ್, ಕನಕ ನಗರ, ದೇವರಾಜ್ ಅರಸ್ ಬಡಾವಣೆ, ಪಿ ಅಂಡ್ ಟಿ ಕಾಲೋನಿ, ಸೂರ್ಯ ಲೇಔಟ್, ಅರವಿಂದ ನಗರ, ಇಂಡಸ್ಟಿçಯಲ್ ಎರಿಯಾ, ಎ.ಪಿ.ಎಂ.ಸಿ., ವೀರಣ್ಣ ಲೇಔಟ್, ಕಾಶೀಪುರ, ಜಯದೇವ ಬಡಾವಣೆ, ಸಹ್ಯಾದ್ರಿನಗರ, ಸಹಕಾರಿ ನಗರ, ಆಲ್ಕೋಳ ವೃತ್ತ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪ ನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಶ್ರೀರಾಮನಗರ, ಟಿಪ್ಪುನಗರ, ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಾಕೀಯ ಕಾಲೇಜು, ಮಲ್ಲಿಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಸೋಮಿನಕೊಪ್ಪ, ಆದರ್ಶನಗರ, ಸಹ್ಯಾದ್ರಿ ನಗರ, ಜೆ.ಹೆಚ್. ಪಟೇಲ್ ಬಡಾವಣೆ, ಕಾಶೀಪುರ, ಕಲ್ಲಹಳ್ಳಿ,ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಇಂದಿರಾಗಾAಧಿ ಲೇಔಟ್ ಪ್ರದೇಶಗಳ ಗ್ರಾಹಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳ್ಳಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular