HomeLatest Newsಅನ್ನ ಮಾಡುವ ಮುನ್ನ ಅಕ್ಕಿ ತೊಳೆಯುವುದು ಹೇಗೆ? ಎಷ್ಟು ಬಾರಿ ಸಾಕು? ಇಲ್ಲಿದೆ ಉತ್ತರ!

ಅನ್ನ ಮಾಡುವ ಮುನ್ನ ಅಕ್ಕಿ ತೊಳೆಯುವುದು ಹೇಗೆ? ಎಷ್ಟು ಬಾರಿ ಸಾಕು? ಇಲ್ಲಿದೆ ಉತ್ತರ!

ಬಹುತೇಕ ಮನೆಗಳಲ್ಲಿ ಅನ್ನ ಮಾಡುವ ಮುನ್ನ ಅಕ್ಕಿಯನ್ನು ಬಿಳಿಯಾಗಿ, ಫಳ-ಫಳ ಹೊಳೆಯಲೆಂದು ನಾಲ್ಕೈದು ಬಾರಿ ಗಟ್ಟಿಯಾಗಿ ಉಜ್ಜಿ ತೊಳೆಯುವ ಅಭ್ಯಾಸವಿರುತ್ತದೆ. ಆದರೆ, ಈ ರೀತಿ ಮಾಡುವುದರಿಂದ ಅಕ್ಕಿಯಲ್ಲಿರುವ ಶಕ್ತಿ ಹಾಗೂ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಅನ್ನ ಮಾಡುವುದಕ್ಕೂ ಮುನ್ನ ಅಕ್ಕಿಯನ್ನು ಸರಿಯಾಗಿ ತೊಳೆಯುವ ಕ್ರಮ ಮತ್ತು ಎಷ್ಟು ಬಾರಿ ತೊಳೆಯಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಅಕ್ಕಿಯನ್ನು ಏಕೆ ತೊಳೆಯಬೇಕು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ಕಿ ಬೆಳೆಸುವಾಗ ಮತ್ತು ಸಂಗ್ರಹಿಸುವಾಗ ಬಳಸುವ ಕೀಟನಾಶಕಗಳು, ರಾಸಾಯನಿಕಗಳು, ಧೂಳು, ಸಣ್ಣ ಕಲ್ಲು ಹಾಗೂ ಹೊಟ್ಟುಗಳನ್ನು ನಿವಾರಿಸಲು ಅಕ್ಕಿ ತೊಳೆಯುವುದು ಮುಖ್ಯ. ಅಷ್ಟೇ ಅಲ್ಲದೆ, ಅಕ್ಕಿಯ ಮೇಲಿರುವ ಹೆಚ್ಚುವರಿ ಪಿಷ್ಟವನ್ನು (Starch) ಸ್ವಚ್ಛಗೊಳಿಸುವುದರಿಂದ ಅನ್ನ ಮುದ್ದೆಯಾಗದೆ ಉದುರುದುರಾಗಿ ರೂಪುಗೊಳ್ಳುತ್ತದೆ.

ತೊಳೆಯುವ ಮುನ್ನ ಈ ಸರಳ ಕೆಲಸ ಮಾಡಿ:

ನೀರು ಹಾಕಿ ಪದೇ ಪದೇ ತೊಳೆಯುವ ಮುನ್ನ, ಸಾಂಪ್ರದಾಯಿಕ ಶೈಲಿಯಲ್ಲಿ ಅಕ್ಕಿಯಲ್ಲಿರುವ ಸಣ್ಣಪುಟ್ಟ ಕಲ್ಲುಗಳನ್ನು ಹೆಕ್ಕಿ ಮೊರದಲ್ಲಿ ಪಾಟಾಯಿಸಿ (Winnowing) ಕಸ ತೆಗೆಯುವುದು ಉತ್ತಮ. ಈ ಹಳೆಯ ಪದ್ಧತಿಯಿಂದ ಅಕ್ಕಿಯನ್ನು ಅತಿಯಾಗಿ ತೊಳೆಯುವ ಅಗತ್ಯವಿರುವುದಿಲ್ಲ ಮತ್ತು ನೀರು ಕೂಡ ಉಳಿತಾಯವಾಗುತ್ತದೆ.

ಅಕ್ಕಿಯನ್ನು ಎಷ್ಟು ಬಾರಿ ತೊಳೆಯುವುದು ಸರಿ?

ಆಹಾರ ತಜ್ಞರು ಹಾಗೂ ಶೆಫ್‌ಗಳ ಪ್ರಕಾರ ಅಕ್ಕಿಯನ್ನು ಎರಡರಿಂದ ಗರಿಷ್ಠ ಮೂರು ಬಾರಿ ಮಾತ್ರ ತೊಳೆಯಬೇಕು.

ಮೊದಲನೇ ಬಾರಿ: ನೀರು ಸುರಿದು ಲಘುವಾಗಿ ಕೈಯಾಡಿಸುವುದರಿಂದ ಧೂಳು ಮತ್ತು ಮೈಕ್ರೋಪ್ಲಾಸ್ಟಿಕ್ ಕಣಗಳು ನಿವಾರಣೆಯಾಗುತ್ತವೆ.

ಎರಡನೇ ಬಾರಿ: ಅಕ್ಕಿ ಮುರಿಯದಂತೆ ಮೆಲ್ಲನೆ ತೊಳೆಯುವುದರಿಂದ ರಾಸಾಯನಿಕಗಳ ಪ್ರಭಾವ ಕಡಿಮೆಯಾಗುತ್ತದೆ.

ಮೂರನೇ ಬಾರಿ: ನೀರು ಸುರಿದು ಬೆರೆಸಿದರೆ ಅಕ್ಕಿ ಸಂಪೂರ್ಣ ಸ್ವಚ್ಛವಾಗುತ್ತದೆ. ನೀರು ಬಿಳಿಯಾಗಿ ಪಾರದರ್ಶಕವಾಗುವವರೆಗೆ ತೊಳೆಯುವ ಅಗತ್ಯವಿರುವುದಿಲ್ಲ. ಉತ್ತಮ ಗುಣಮಟ್ಟದ ಅಕ್ಕಿಯಾಗಿದ್ದರೆ ಒಂದು ಅಥವಾ ಎರಡು ಬಾರಿ ತೊಳೆದರೂ ಸಾಕಾಗುತ್ತದೆ.

ಹೆಚ್ಚು ಬಾರಿ ಉಜ್ಜಿ ತೊಳೆಯುವುದರಿಂದ ಆಗುವ ಅನಾನುಕೂಲಗಳು:

ಪೋಷಕಾಂಶಗಳ ನಾಶ: ಅಕ್ಕಿಯ ಹೊಟ್ಟಿನಲ್ಲಿರುವ ವಿಟಮಿನ್ ಬಿ-ಕಾಂಪ್ಲೆಕ್ಸ್ (ವಿಶೇಷವಾಗಿ ಥಯಾಮಿನ್), ಕಬ್ಬಿಣಾಂಶ ಹಾಗೂ ನಾರಿನಂಶಗಳು ನೀರಿಗೆ ಕರಗಿ ವ್ಯರ್ಥವಾಗುತ್ತವೆ.

ರುಚಿ ಮತ್ತು ಪರಿಮಳ ನಷ್ಟ: ಅತಿಯಾಗಿ ತೊಳೆಯುವುದರಿಂದ ಅಕ್ಕಿಯ ನೈಸರ್ಗಿಕ ಪರಿಮಳ ಕಡಿಮೆಯಾಗಿ, ಅನ್ನದ ರುಚಿ ಕುಗ್ಗುತ್ತದೆ.

ಅನ್ನ ಅಂಟಾಗುವುದು: ಕಾಳುಗಳನ್ನು ಗಟ್ಟಿಯಾಗಿ ತೊಳೆಯುವುದರಿಂದ ಅನ್ನ ಬೆಂದ ಮೇಲೆ ಮೆತ್ತಗಾಗಿ ಅಂಟು ಅಂಟಾಗುತ್ತದೆ.

ಅಕ್ಕಿ ತೊಳೆದ ನೀರನ್ನು ವ್ಯರ್ಥ ಮಾಡಬೇಡಿ

ಅಕ್ಕಿ ತೊಳೆದ ನೀರನ್ನು (ಗಂಜಿನೀರು) ಚೆಲ್ಲುವ ಬದಲು ಮನೆ ಗಿಡಗಳಿಗೆ ಸುರಿದರೆ ಅದು ಅತ್ಯುತ್ತಮ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಹಳ್ಳಿಗಳಲ್ಲಿ ಇದನ್ನು ಜಾನುವಾರುಗಳಿಗೆ ಕುಡಿಯಲು ನೀಡುತ್ತಾರೆ. ಅಲ್ಲದೆ, ಈ ನೀರಿನಿಂದ ಮುಖ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular