HomeKarnatakaನಿವೃತ್ತ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ

ನಿವೃತ್ತ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ

1-7-2022ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತ ಸರ್ಕಾರಿ ನೌಕರರು ಹಾಗೂ ಪದಾಧಿಕಾರಿಗಳು ಮಹತ್ವದ ಸೂಚನೆ ಹಾಗೂ ಮನವಿಯೊಂದನ್ನು ಮಾಡಿದ್ದಾರೆ.

1-7-2022ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸರ್ಕಾರ ಡಿಸಿಆರ್ ಜಿ ಕಮ್ಯೂಟೇಷನ್ ಗಳಿಕೆ ರಜೆ ನಗದೀಕರಣದಲ್ಲಿ ಅವೈಜ್ಞಾನಿಕ ತೀರ್ಮಾನ ಕೈಗೊಂಡು ಅನ್ಯಾಯ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ನಿವೃತ್ತ ಸರ್ಕಾರಿ ನೌಕರರು ಪ್ರಯತ್ನಿಸುತ್ತಿದ್ದು, ಈ ಅವಧಿಯಲ್ಲಿ ನಿವೃತ್ತರಾದ ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ.

1-7-2022ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ ವೇದಿಕೆಯೊಂದನ್ನು ರೂಪಿಸಲಾಗಿದ್ದು, ಈ ಮೂಲಕ ಅನ್ಯಾಯ ಸರಿಪಡಿಸಲು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮನವಿ ಮಾಡಲು ಹಾಗೂ ಸರ್ಕಾರ ಒಪ್ಪದಿದ್ದರೆ ಕಾನೂನಾತ್ಮಕ ಹೋರಾಟ ಮಾಡಲು ತೀರ್ಮಾನಿಸಿ ನಿವೃತ್ತ ನೌಕರರ ಬೆಂಬಲ ಕೋರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯವಾಗಿ ಹಾಸನ ಜಿಲ್ಲೆಯವರಾಗಿರಲಿ. ಯಾವುದೇ ಇಲಾಖೆಯ ನೌಕರರು ಈ ಅವಧಿಯಲ್ಲಿ ನಿವೃತ್ತರಾಗಿದ್ದರೆ ಅವರ ಮಾಹಿತಿಯನ್ನು ಕೆಳಕಂಡ ಸಂಖ್ಯೆಗೆ ನೀಡಲು ಕೋರಲಾಗಿದೆ.

ಒಂದು ವೇಳೆ ಬೇರೆ ಜಿಲ್ಲೆಯಲ್ಲಿ ನಿವೃತ್ತರಾಗಿದ್ದು, ಹಾಸನ ಜಿಲ್ಲೆಯಲ್ಲಿ ವಾಸ ಇರುವ ನೌಕರರಾಗಿದ್ದರೂ ಅವರ ಮಾಹಿತಿ ನೀಡಬಹುದು.

ನಿಮ್ಮ ನಿವೃತ್ತಿ ದಿನಾಂಕ, ಹೆಸರು, ಇಲಾಖೆ, ಕಚೇರಿ ಹೆಸರು ದೂರವಾಣಿ ಸಂಖ್ಯೆ ಮಾಹಿತಿಯನ್ನು ಈ ದೂರವಾಣಿ ಸಂಖ್ಯೆಗೆ ಕಳುಹಿಸಿ

ದೂರವಾಣಿ ಸಂಖ್ಯೆ: 9448346347ಕ್ಕೆ ಕಳುಹಿಸಿ.

ನಮ್ಮ ಹೋರಾಟಕ್ಕೆ ಬೆಂಬಲವಿರಲಿ ಎಂದು ನಿವೃತ್ತ ಸರ್ಕಾರಿ ನೌಕರರು-ಹಾಸನ ಹಾಗೂ ಪದಾಧಿಕಾರಿಗಳಾದ ಹರೀಶ್ ಕಟ್ಟೇಬೆಳಗುಲಿ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular