HomeLatest Newsಏ.12 ರಂದು ವಸತಿ ಶಾಲೆ ಸಾಮಾನ್ಯ ಪ್ರವೇಶ ಪರೀಕ್ಷೆ , ಪೋಷಕರಿಗೆ ಇಲ್ಲಿದೆ ಮಾಹಿತಿ

ಏ.12 ರಂದು ವಸತಿ ಶಾಲೆ ಸಾಮಾನ್ಯ ಪ್ರವೇಶ ಪರೀಕ್ಷೆ , ಪೋಷಕರಿಗೆ ಇಲ್ಲಿದೆ ಮಾಹಿತಿ

2026-27ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್, 12 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.

ಮೌಲನಾ ಆಜಾದ್ ಮಾದರಿ ಶಾಲೆ, ಜಿಎಂಪಿ ಶಾಲೆ ಕ್ಯಾಂಪಸ್, ಕೆನರಾ ಬ್ಯಾಂಕ್ ಮುಂಭಾಗ ಬಿ.ಎಂ.ರೋಡ್ ಕುಶಾಲನಗರ ಇಲ್ಲಿ ಪರೀಕ್ಷೆ ನಡೆಯಲಿದೆ. ಏಪ್ರಿಲ್ ತಿಂಗಳ ಮೊದಲನೇ ವಾರ ಪ್ರವೇಶ ಪತ್ರಗಳನ್ನು https://dom.karnataka.gov.in ಆನ್‍ಲೈನ್ ಮೂಲಕ ಡೌನ್‍ಲೋಡ್ ಮಾಡಿ ಅಥವಾ ಅಲ್ಪಸಂಖ್ಯಾತರ ಜಿಲ್ಲಾ ಕಚೇರಿ ಮತ್ತು ತಾಲ್ಲೂಕು ಕಚೇರಿಗಳು ಹಾಗೂ ಸಂಬಂಧಪಟ್ಟ ವಸತಿ ಶಾಲೆಗಳ ಪ್ರಾಂಶುಪಾಲರುಗಳನ್ನು ಸಂಪರ್ಕಿಸಿ ಪಡೆಯಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08272-225528/220214/ 9972799091 ಹಾಗೂ ಪ್ರಾಂಶುಪಾಲರು, ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ದೂ.ಸಂ. 7975251179, ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರ್ಜಿ ಗ್ರಾಮ, ಪೆರಂಬಾಡಿ, ವಿರಾಜಪೇಟೆ ತಾಲ್ಲೂಕು ದೂ.ಸಂ. 8105409405, ತಾಲ್ಲೂಕು ಮಾಹಿತಿ ಕೇಂದ್ರ, ಸೋಮವಾರಪೇಟೆ ದೂ.ಸಂ.8548068519 ಹಾಗೂ ತಾಲ್ಲೂಕು ಮಾಹಿತಿ ಕೇಂದ್ರ ವಿರಾಜಪೇಟೆ ದೂ.ಸಂ.9900731037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದಿವಾಕರ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular