ವಿಜಯಪುರ : ಕೊಳಗೆ ಬಾವಿಗೆ ಬಿದ್ದ ಸಾತ್ವಿಕ್ ನನ್ನು ಹೊರಕ್ಕೆ ಕರೆತರಲಾಗಿದೆ, ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.ಹಾಗೂ ಕಾರ್ಯಾಚರಣೆಯ ಕೊನೆಯ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಸಾತ್ವಿಕ್ ಹೊರ ಜಗತ್ತನ್ನು ನೋಡುವಂತಾಗಿದ್ದಾನೆ. ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ನಮ್ಮ ಹೆಮ್ಮೆಯ ಎಸ್ ಡಿ ಆರ್ ಎಫ್, ಪೊಲೀಸ್ ತಂಡ, ವಿಜಯಪುರ ಜಿಲ್ಲಾ ಆಡಳಿತಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ನಮ್ಮೆಲ್ಲ ಜನರಲ್ಲಿ ಒಂದು ಮನವಿ: ದಯಮಾಡಿ ನೀರು ಬಾರದ, ನೀರು ನೀಡುತ್ತಿರುವ ಕೊಳವೆಬಾವಿಗಳನ್ನು ಉಪೇಕ್ಷೆ ಮಾಡದಿರಿ. ಸೂಕ್ತ ಬಂದೋಬಸ್ತ್ ಮಾಡಿ. ಮುಂದೆ ಎಂದೂ ಎಲ್ಲೂ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
𝐒𝐚𝐭𝐯𝐢𝐤'𝐬 𝐬𝐮𝐫𝐯𝐢𝐯𝐚𝐥 𝐢𝐬 𝐚 𝐭𝐫𝐢𝐮𝐦𝐩𝐡! 𝐊𝐮𝐝𝐨𝐬 𝐭𝐨 𝐭𝐡𝐞 𝐝𝐞𝐝𝐢𝐜𝐚𝐭𝐞𝐝 𝐫𝐞𝐬𝐜𝐮𝐞 𝐭𝐞𝐚𝐦 𝐰𝐡𝐨 𝐰𝐨𝐫𝐤𝐞𝐝 𝐭𝐢𝐫𝐞𝐥𝐞𝐬𝐬𝐥𝐲 𝐟𝐨𝐫 𝟐𝟎+ 𝐡𝐨𝐮𝐫𝐬. Let's prioritize safety measures to prevent similar accidents and ensure the well-being of… pic.twitter.com/f9JV9iQENf
— M B Patil (@MBPatil) April 4, 2024
ಸಾವು ಗೆದ್ದ ಸಾತ್ವಿಕ್!
ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳುನಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಸಾತ್ವಿಕ್ ಹೊರ ಜಗತ್ತನ್ನು ನೋಡುವಂತಾಗಿದ್ದಾನೆ. ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ನಮ್ಮ ಹೆಮ್ಮೆಯ ಎಸ್ ಡಿ ಆರ್ ಎಫ್, ಪೊಲೀಸ್… pic.twitter.com/GB29XN9Ogh
— M B Patil (@MBPatil) April 4, 2024

