HomeEntertainment'ಗೆಲುವಿನ ಹಾದಿ' ಎಂಬ ಕಿರು ಚಿತ್ರ ರಿಲೀಸ್

‘ಗೆಲುವಿನ ಹಾದಿ’ ಎಂಬ ಕಿರು ಚಿತ್ರ ರಿಲೀಸ್

ಜನಪ್ರಿಯ ಯೂಟ್ಯೂಬ್ ಚಾನೆಲ್ ಆದ ಆನಂದ್ ಆಡಿಯೋದಲ್ಲಿ ಸಾಕಷ್ಟು ಕಿರು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದ್ದು, ಇದೀಗ ‘ಗೆಲುವಿನ ಹಾದಿ’ ಎಂಬ ಶಾರ್ಟ್ ಫಿಲಂ ನಿನ್ನೆಯಷ್ಟೇ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ಜೀವ ಎಸ್ ವಿಶ್ವನಾಥ್ ಈ ಕಿರು ಚಿತ್ರವನ್ನು ನಿರ್ದೇಶಿಸಿದ್ದು, ಅಭಿಜಿತ್,  ಖುಷಿ ಶೆಟ್ಟಿ, ಪ್ರವೀಣ್ ತಾಂಬೆ, ಶ್ರೀವಸ್ತ, ಸೇರಿದಂತೆ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ.  ಪ್ರಜೋತ್ ಸಂಗೀತ ಸಂಯೋಜನೆ ನೀಡಿದ್ದು, ಸತೀಶ್, ರವಿ  ಅವರ ಛಾಯಾಗ್ರಹಣವಿದೆ. ಅಭಿ ತಂಬೆ  ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪ್ರವೀಣ್ ಕುಮಾರ್ ಪಿ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಚೇತನ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular