HomeKarnatakaBREAKING : ರಾಜ್ಯದ 30 ಜೀವಾವಧಿ ಕೈದಿಗಳಿಗೆ 'ಬಿಡುಗಡೆ ಭಾಗ್ಯ’ : ಸನ್ನಡತೆ ಆಧಾರದ ಮೇಲೆ...

BREAKING : ರಾಜ್ಯದ 30 ಜೀವಾವಧಿ ಕೈದಿಗಳಿಗೆ ‘ಬಿಡುಗಡೆ ಭಾಗ್ಯ’ : ಸನ್ನಡತೆ ಆಧಾರದ ಮೇಲೆ  ರಿಲೀಸ್.!

ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 30 ಜೀವಾವಧಿ ಕೈದಿಗಳನ್ನು ಅವರ ಉತ್ತಮ ನಡವಳಿಕೆಯ ಆಧಾರದ ಮೇಲೆ ಅವಧಿಗೂ ಮುನ್ನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪರಿಶೀಲನಾ ಸಮಿತಿಯ (LCR) ಶಿಫಾರಸಿನ ಮೇರೆಗೆ, ಶಿಕ್ಷಾ ಅವಧಿಯಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಆಯ್ಕೆ ಮಾಡಲಾಗಿದೆ.ಸಂವಿಧಾನದ ವಿಧಿ 161ರ ಅಡಿಯಲ್ಲಿ ರಾಜ್ಯಪಾಲರ ಅನುಮೋದನೆ ಪಡೆದು ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 54 ಪ್ರಕರಣಗಳನ್ನು ಸಮಿತಿ ಪರಿಶೀಲಿಸಿದ್ದು, ಅದರಲ್ಲಿ 30 ಮಂದಿಯನ್ನು ಬಿಡುಗಡೆಗೆ ಆಯ್ಕೆ ಮಾಡಿದೆ.

ಮಹಿಳಾ ಕೈದಿಗಳ ಬಿಡುಗಡೆ: ಬಿಡುಗಡೆಯಾಗುತ್ತಿರುವವರಲ್ಲಿ ಮೂವರು ಮಹಿಳಾ ಕೈದಿಗಳು ಸೇರಿದ್ದಾರೆ. ಇವರು ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಜೈಲುಗಳಲ್ಲಿದ್ದರು.ದೀರ್ಘಕಾಲದವರೆಗೆ ಜೈಲು ಶಿಕ್ಷೆ ಅನುಭವಿಸಿ ಸಮಾಜದ ಮುಖ್ಯವಾಹಿನಿಗೆ ಮರಳಲು ಬಯಸುವ ಕೈದಿಗಳಿಗೆ ಈ ಆದೇಶವು ಹೊಸ ಜೀವನದ ಭರವಸೆಯನ್ನು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ಜೈಲಿನಿಂದ ಎಷ್ಟು ಮಂದಿ?:

ಬೆಂಗಳೂರು (ಪರಪ್ಪನ ಅಗ್ರಹಾರ): 14 ಮಂದಿ

ವಿಜಯಪುರ: 05 ಮಂದಿ

ಬಳ್ಳಾರಿ: 03 ಮಂದಿ

ಮೈಸೂರು, ಶಿವಮೊಗ್ಗ, ಧಾರವಾಡ: ತಲಾ ಒಬ್ಬರು

ಬೆಳಗಾವಿ ಮತ್ತು ಕಲಬುರಗಿ: ತಲಾ ಇಬ್ಬರು

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular