ಬೆಂಗಳೂರು : ರಾಜ್ಯ ಸರ್ಕಾರ ‘ಅನರ್ಹ ಪಡಿತರ ಚೀಟಿ’ ರಿಯಾಲಿಟಿ ಚೆಕ್ ಮಾಡಲು ಮುಂದಾಗಿದ್ದು, ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಹೌದು ಆಹಾರ ಇಲಾಖೆಯು ಎಪಿಎಲ್, ಬಿಪಿಎಲ್ ಕಾರ್ಡ್ ಗಳ ರಿಯಾಲಿಟಿ ಚೆಕ್ ಗೆ ಮುಂದಾಗಿದೆ. ಮನೆ ಮನೆಗೆ ಭೇಟಿ ನೀಡಲಿರುವ ಅಧಿಕಾರಿಗಳನ್ನ ಅನರ್ಹರ ಕಾರ್ಡ್ ಗಳನ್ನ ಅರ್ಹತೆ ಇರುವವರಿಗೆ ನೀಡಲಿದ್ದಾರೆ.
ಅರ್ಹರಿಲ್ಲದಿದ್ರೂ ಇಟ್ಟುಕೊಂಡಿರುವ ಬಿಪಿಎಲ್ ಕಾರ್ಡ್ ನ್ನ ಅರ್ಹರಿಗೆ ತಲುಪಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಆಯಾಯ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಪರಿಷ್ಕರಣೆ ಮಾಡುತ್ತಿರುವ ಕಾರ್ಡ್ ಪಟ್ಟಿ ಕಳುಹಿಸಿಕೊಟ್ಟಿದೆ. ತೆರಿಗೆ ಪಾವತಿಸುವ, ಜಮೀನು, ಕಾರು, ಮನೆ ಇರುವವರ ಲಾರ್ಡ್ ಗಳನ್ನ ಡಿಲೀಟ್ ಮಾಡಲು ಮುಂದಾಗಿದೆ. ಕುಟುಂಬದವರು ಮನೆಯ ಸದಸ್ಯರ ಆಧಾರ್ ಕಾರ್ಡ್ ಹಾಗೂ ಆದಾಯ ಧೃಡೀಕರಣ ಪತ್ರವನ್ನ ಪರಿಶೀಲನೆ ವೇಳೆ ತೋರಿಸಬೇಕು.
ರಾಜ್ಯದಲ್ಲಿ ಶೀಘ್ರವೇ ಅರ್ಹರಿಗೆ ಹೊಸ ‘BPL ಕಾರ್ಡ್’ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಇತ್ತೀಚೆಗೆ ಹೇಳಿದ್ದರು..ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ಮಾತನಾಡಿದ್ದ ಸಚಿವರು ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. 10 ಲಕ್ಷ ಅನರ್ಹರನ್ನ ಎಪಿಎಲ್ ಕಾರ್ಡ್ ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದಿದ್ದರು.ಎಪಿಎಲ್ ಕಾರ್ಡ್ ಗೆ ಮೊದಲು 15 ಕೆಜಿ ಅಕ್ಕಿ ಕೊಡುತ್ತಿದ್ದೆವು. ಆದರೆ ಹಲವರು ಅಕ್ಕಿ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ 1 ವರ್ಷದಿಂದ ಅಕ್ಕಿ ತೆಗೆದುಕೊಳ್ಳದೇ ಇದ್ದರವರನ್ನ ಸಸ್ಪೆಂಡ್ ಮಾಡಿದ್ದೇವೆ ಎಂದು ಹೇಳಿದ್ದರು.

