HomeKarnatakaರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್ ಹಾಗೂ ಹತ್ಯೆ ಪ್ರಕರಣ: 8 ಆರೋಪಿಗಳು ಅರೆಸ್ಟ್: ಕೊಲೆ ಹಿಂದಿನ...

ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್ ಹಾಗೂ ಹತ್ಯೆ ಪ್ರಕರಣ: 8 ಆರೋಪಿಗಳು ಅರೆಸ್ಟ್: ಕೊಲೆ ಹಿಂದಿನ ಕಾರಣವೇನು ಗೊತ್ತೇ?

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್​ ಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೮ ಆರೋಪಿಗಳನ್ನು ಬಂಧಿಸಿದ್ದಾರೆ.

ಆನೇಕಲ್ ನಲ್ಲಿ ಗೋಪಾಲ್ ನನ್ನು ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿಗಳು ತಮಿಳುನಾಡಿನಲ್ಲಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆನೇಕಲ್ ಠಾಣೆ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್​, ಪ್ರಶಾಂತ್ ಮತ್ತು ಓರ್ವ ಅಪ್ರಾಪ್ತ ಬಂಧಿತರು. ಆರೋಪಿಗಳು ಕಿಡ್ನ್ಯಾಪ್ ಮಾಡಲು ಬಳಸಿದ್ದ ಹುಂಡೈ ಕಾರನ್ನು ವಶಕ್ಕೆ ಪಡೆಯಲಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ಗೋಪಾಲ್ ಅಲಿಯಾಸ್​ ಗೋಪಿ ಆನೇಕಲ್ ತಾಲೂಕಿನ ಹೊನ್ನಕಳಶಾಪುರ ನಿವಾಸಿ. ಈತನ ಸಂಬಂಧಿಯೇ ಆಗಿರುವ ಮೋಹನ್ ಬಾಬು ಆ್ಯಂಡ್​ ಗ್ಯಾಂಗ್​ನಿಂದ ಬರ್ಬರವಾಗಿ ಕೊಲೆಯಾಗಿದ್ದಾನೆ. ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಬರುತ್ತಿದ್ದ ವೇಳೆ ಅತ್ತಿಬೆಲೆ ಮತ್ತು ಆನೇಕಲ್ ಮಾರ್ಗ ಮಧ್ಯೆ ಕರ್ಪೂರು ಬಳಿ ಗೂಡ್ಸ್ ವಾಹನ ಗೋಪಾಲ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿ ಹಿಂಬಾಲಿಸಿ ಬಂದ ಐದಾರು ಮಂದಿ ಗೋಪಾಲ್ ಮತ್ತು ಸ್ನೇಹಿತ ಸತೀಶ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಕಿರುಚಾಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಗೋಪಾಲ್​ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಎಸ್ಕೇಪ್ ಆಗಿದ್ದರು.

ಗೋಪಾಲ್ ಸ್ನೇಹಿತ ಸತೀಶ್ ಕೂಡಲೇ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ಹಳೆ ದ್ವೇಷ ಹಿನ್ನೆಲೆ ಮೋಹನ್ ಬಾಬು ಕಿಡ್ನ್ಯಾಪ್ ಮಾಡಿಸಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದರು. ಬಳಿಕ ತಮಿಳುನಾಡಿನ ಡೆಂಕಣೀಕೋಟೆ ಬಳಿ ಗೋಪಾಲ್ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇತ್ತ ಆಕ್ರೋಶಗೊಂಡ ಮೃತ ಗೋಪಾಲ್ ಕುಟುಂಬದವರು ಮತ್ತು ಸಂಬಂಧಿಗಳು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಮೋಹನ್ ಬಾಬು ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಮೃತ ಗೋಪಾಲ್ ಮತ್ತು ಆರೋಪಿ ಮೋಹನ್ ಬಾಬು ಮುಂಚೆ ಜೊತೆಯಾಗಿಯೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆದರೆ ಹತ್ತು ವರ್ಷಗಳ ಹಿಂದೆ ಗೋಪಾಲ್ ಸ್ವಾತಿ ಎಂಬ ಯುವತಿಯನ್ನು ವಿವಾಹವಾಗಿದ್ದು, ಆರೋಪಿ ಮೋಹನ್ ಬಾಬುಗೆ ದ್ವೇಷಕ್ಕೆ ಕಾರಣವಾಗಿತ್ತು. ಗೋಪಾಲ್ ಮದುವೆ ಆದ ಸ್ವಾತಿಯನ್ನು ಮದುವೆ ಆಗಲು ಆರೋಪಿ ಮೋಹನ್ ಬಾಬು ಆಸೆ ಪಟ್ಟಿದ್ದ. ಆದರೆ ಗೋಪಾಲ್ ಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದ್ದ. ಮದುವೆ ಬಳಿಕ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಜೊತೆಗೆ ವ್ಯವಹಾರದಲ್ಲೂ ಗೋಪಾಲ್ ಚೆನ್ನಾಗಿ ಬೆಳೆಯುವುದನ್ನು ಸಹಿಸದ ಮೋಹನ್ ಬಾಬು ಎರಡು ವರ್ಷದ ಹಿಂದೆ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಬಿಟ್ಟು ಕಳುಹಿಸಿದ್ದ. ಅಲ್ಲದೆ ಪದೇ ಪದೇ ನನ್ನ ವ್ಯವಹಾರಗಳಿಗೆ ನೀನು ಕೈ ಹಾಕುತ್ತಿಯಾ ಎಂದು ಮೋಹನ್ ಬಾಬು ಕೊಲೆ ಬೆದರಿಕೆ ಹಾಕಿದ್ದ. ಗೋಪಾಲ್ ಮಾತ್ರ ಪತ್ನಿ ಬಳಿ ಹೇಳಿಕೊಂಡು ರಾಜಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದನಂತೆ. ಆದರೂ ಮೋಹನ್ ಬಾಬು ದ್ವೇಷವನ್ನ ಬಿಡದೆ ಕಳೆದ ಭಾನುವಾರ 25 ಲಕ್ಷ ರೂ ಸುಪಾರಿ ನೀಡಿ ಗೋಪಾಲ್​ನನ್ನು ಕಿಡ್ನ್ಯಾಪ್ ಮಾಡಿಸಿ ಕೊಲೆ ಮಾಡಿಸಿದ್ದಾಗಿ ಆರೋಪಿ ಮೋಹನ್ ಬಾಬು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular