HomeLatest NewsBREAKING: ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗಳ ಮೇಲೆ RCB ಆಟಗಾರರಿಗೆ ಸನ್ಮಾನ; ಅದ್ಧೂರಿಯಾಗಿ ನಡೆದ ಅಭಿನಂದನಾ...

BREAKING: ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗಳ ಮೇಲೆ RCB ಆಟಗಾರರಿಗೆ ಸನ್ಮಾನ; ಅದ್ಧೂರಿಯಾಗಿ ನಡೆದ ಅಭಿನಂದನಾ ಕಾರ್ಯಕ್ರಮ

ಬೆಂಗಳೂರು: 18 ವರ್ಷದ ಬಳಿಕ ಆರ್ ಸಿಬಿ ಐಪಿಎಲ್ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿದ್ದು, ಆರ್ ಸಿಬಿ ಎಲ್ಲಾ ಆಟಗಾರರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗೆ ಆಗಮಿಸಿದ್ದಾರೆ.

ಐಪಿಎಲ್ ಟ್ರೋಫಿ ಜೊತೆಗೆ ಆಗಮಿಸಿದ ಆರ್ ಸಿಬಿ ಆಟಗಾರರು ವಿಧನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಬರುತ್ತಿದ್ದಂತೆ ಕ್ಯಾಪ್ಟನ್ ರಜತ್ ಪಾಟಿದಾರ್ ಹಾಗೂ ಟೀಂ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿ ಸಂಭ್ರಮಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆರೆದಿದ್ದ ಜನಸಾಗರ ಆರ್ ಸಿಬಿ ಆರ್ ಸಿಬಿ ಎಂದು ಜಯಘೋಷದ ಮೂಲಕ ಹರ್ಷೋದ್ಘಾರ ವ್ಯಕ್ತಪಡಿಸಿತು. ಬಳಿಕ ನಾಡಗೀತೆಯನ್ನು ಹಾಡಲಾಯಿತು. ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆರ್ ಸಿಬಿ ನಾಯಕ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರನ್ನು ಸನ್ಮಾನಿಸಿ ಅಭಿನಂದಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular