HomeLatest NewsBREAKING : ವಿಧಾನಸೌಧದ ಆವರಣದಲ್ಲಿ ಇಂದು ಸಂಜೆ 'RCB' ಆಟಗಾರರಿಗೆ ಸನ್ಮಾನ, ಅಭಿಮಾನಿಗಳಿಗೆ ನೋ ಎಂಟ್ರಿ.!

BREAKING : ವಿಧಾನಸೌಧದ ಆವರಣದಲ್ಲಿ ಇಂದು ಸಂಜೆ ‘RCB’ ಆಟಗಾರರಿಗೆ ಸನ್ಮಾನ, ಅಭಿಮಾನಿಗಳಿಗೆ ನೋ ಎಂಟ್ರಿ.!

ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ಇಂದು ಸಂಜೆ ಆರ್ ಸಿ ಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳಿಗೆ ಪ್ರವೇಶ ಇಲ್ಲ ಎಂದು DPAR ಕಾರ್ಯದರ್ಶಿ ಸತ್ಯವತಿ ಮಾಹಿತಿ ನೀಡಿದ್ದಾರೆ.

ನಿನ್ನೆಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿ ತವರೂರಿಗೆ ಆಗಮಿಸುತ್ತಿರುವ ಕರ್ನಾಟಕದ ಹೆಮ್ಮೆಯ ಆರ್ಸಿಬಿ ತಂಡವನ್ನು ಸಮಸ್ತ ಕನ್ನಡಿಗರ ಪರವಾಗಿ ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಿ, ಸನ್ಮಾನಿಸಲಿದ್ದೇನೆ. ಕೋಟ್ಯಂತರ ಅಭಿಮಾನಿಗಳ 18 ವರ್ಷಗಳ ಕಾತುರ, ಕಾಯುವಿಕೆ ಕೊನೆಗೊಂಡು, ಇಡೀ ರಾಜ್ಯದಲ್ಲೇ ಹಬ್ಬದ ವಾತಾವರಣ ಸೃಷ್ಟಿಸಿದ ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ನೀವೂ ಭಾಗಿಯಾಗಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ತೆರೆದ ವಾಹನದಲ್ಲಿ RCB ಆಟಗಾರರ ಮೆರವಣಿಗೆ ಇಲ್ಲ

ಹಾಗೂ ತೆರೆದ ವಾಹನದಲ್ಲಿ RCB ಆಟಗಾರರ ಮೆರವಣಿಗೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ‘ ಸಿಎಂ , ಡಿಸಿಎಂ ನೇತೃತ್ವದಲ್ಲಿ ಆಟಗಾರರನ್ನು ಇಂದು ಸನ್ಮಾನಿಸಲಾಗುತ್ತದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಬಳಿ ಕಾರ್ಯಕ್ರಮ ನಡೆಯಲಿದೆ. ಭದ್ರತಾ ದೃಷ್ಟಿಯಿಂದ ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಇಲ್ಲ , . ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಆಟಗಾರರನ್ನು ಅಭಿನಂದಿಸಲಾಗುತ್ತದೆ. ಸಿಎಂ , ಡಿಸಿಎಂ ನೇತೃತ್ವದಲ್ಲಿ ಆಟಗಾರರನ್ನು ಇಂದು ಸನ್ಮಾನಿಸಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಆರ್ ಸಿಬಿ (RCB) ಆಟಗಾರರು ಬಸ್ ನಲ್ಲೇ ಬರುತ್ತಾರೆ, ಬಸ್ ನಲ್ಲೇ ಹೋಗುತ್ತಾರೆ. ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular