HomeLatest NewsBIG NEWS: ಆರ್ ಸಿಬಿಗೆ ಅಭಿನಂದನಾ ಕಾರ್ಯಕ್ರಮ: ವಿಧಾನಸೌಧದ ಬಳಿ ಅಭಿಮಾನಿಗಳಿಗೆ ನೋ ಎಂಟ್ರಿ: DPAR...

BIG NEWS: ಆರ್ ಸಿಬಿಗೆ ಅಭಿನಂದನಾ ಕಾರ್ಯಕ್ರಮ: ವಿಧಾನಸೌಧದ ಬಳಿ ಅಭಿಮಾನಿಗಳಿಗೆ ನೋ ಎಂಟ್ರಿ: DPAR ಕಾರ್ಯದರ್ಶಿ ಸತ್ಯವತಿ ಮಾಹಿತಿ

ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಗೆಲುವು ಸಾಧಿಸಿ ಐಪಿಎಲ್ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗಳ ಮೇಲೆ ಆರ್ ಸಿಬಿ ಆಟಗಾರರನ್ನು ಸರ್ಕಾರದ ವತಿಯಿಂದ ಗೌರವಿಸಿ, ಅಭಿನಂದಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.,ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿರಲಿದ್ದಾರೆ. ಆದರೆ ಅಭಿನಂದನಾ ಕಾರ್ಯಕ್ರಮಕ್ಕೆ ವಿಧಾನಸೌಧಕ್ಕೆ ಅಭಿಮನಿಗಳ ಪ್ರವೇಶಕ್ಕೆ ಅವಕಾಶವಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಮಾಹಿತಿ ನೀಡಿದ್ದು, ಭದ್ರತೆಯ ದೃಷ್ಟಿಯಿಂದ ವಿಧಾನಸೌಧದ ಬಳಿ, ಅಭಿಮಾನಿಗಳಿಗೆ ಎಂಟ್ರಿ ಇಲ್ಲ. ಅಭಿಮನಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಲ್ಲಿ ಸಂಭ್ರಮಾಚರಣೆ ಮಾಡಬಹುದು ಎಂದು ತಿಳಿಸಿದ್ದಾರೆ.

ಇನ್ನು ಆರ್ ಸಿಬಿ ತಂಡದ ಆಟಗಾರರಿಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಯಾವುದೇ ತೆರದ ವಾಹನದ ಮೆರವಣಿಗೆ ಇರುವುದಿಲ್ಲ. ಆಟಗಾರರು ಬಸ್ ನಲ್ಲಿಯೇ ಬಂದು ವಿಧಾನಸೌಧದಿಂದ ಬಸ್ ನಲ್ಲಿಯೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳುತ್ತಾರೆ. ಭದ್ರತೆ ದೃಷ್ಟಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular