ಧರ್ಮಶಾಲಾ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಜಯ ಗಳಿಸಿದ್ದು, ಈ ಆವೃತ್ತಿಯಲ್ಲಿ ಒಂಬತ್ತನೇ ಜಯದೊಂದಿಗೆ ಪ್ಲೇ ಆಫ್ ಅಂತಕ್ಕೆ ಅಧಿಕೃತ ಪ್ರವೇಶ ಪಡೆದಿದೆ. ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 23 ರನ್ ಗಳ ಗೆಲುವು ಸಾಧಿಸಿದ ಆರ್.ಸಿ.ಬಿ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಧರ್ಮಶಾಲಾದ ಹೆಚ್.ಪಿ.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ. ನಾಲ್ಕು ವಿಕೆಟ್ ಗೆ 222 ರನ್ ಗಳಿಸಿತು. ಪಂಜಾಬ್ ಎಂಟು ವಿಕೆಟ್ ಗೆ 199 ರನ್ ಕಲೆ ಹಾಕಿ ಸೋಲು ಕಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ ಜೇಕಬ್ ಬೆಥೆಲ್(11) ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಉತ್ತಮ ಆರಂಭ ಪಡೆಯಿತು. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ 76 ರನ್ ಜೊತೆ ಆಟದೊಂದಿಗೆ ಆರ್.ಸಿ.ಬಿ.ಗೆ ಚೇತರಿಕೆ ನೀಡಿದರು. ಪಡಿಕ್ಕಲ್ 45 ರನ್ ಗಳಿಸಿದರು. ಐಪಿಎಲ್ ನಲ್ಲಿ 67ನೇ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ 37 ಎಸೆತದಲ್ಲಿ 58 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 73 ರನ್, ಟೀಮ್ ಡೇವಿಡ್ 12 ಎಸೆತಗಳಲ್ಲಿ 28 ರನ್ ಗಳಿಸಿದರು.
ಆರ್.ಸಿ.ಬಿ. ನಾಲ್ಕು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದ್ದು, ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ಎಂಟು ವಿಕೆಟ್ ಗೆ 199 ರನ್ ಗಳಿಸಿ 23 ರನ್ ಗಳಿಂದ ಪರಾಭವಗೊಂಡಿತು. ಶಶಾಂಕ್ ಸಿಂಗ್ 56, ಕೊನಲಿ 37 ರನ್ ಗಳಿಸಿದರು.

