ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ಹೊಸ ಅಸ್ತ್ರವನ್ನು ಸಿದ್ಧಪಡಿಸಿದೆ. ತನ್ನ ಜವಾಬ್ದಾರಿಯುತ ವ್ಯವಹಾರ ನಡವಳಿಕೆ ಚೌಕಟ್ಟಿನ ಅಡಿಯಲ್ಲಿ ಕರಡು ಮೂರನೇ ತಿದ್ದುಪಡಿ ನಿರ್ದೇಶನಗಳು, 2026 ಅನ್ನು ಬಿಡುಗಡೆ ಮಾಡಲಾಗಿದ್ದು ಇದು ಡಿಜಿಟಲ್ ವಹಿವಾಟು ನಡೆಸುವವರಿಗೆ ಹೆಚ್ಚಿನ ಸುರಕ್ಷತೆ ನೀಡಲಿದೆ.ಇದು ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಕಾರ್ಡ್ ವಹಿವಾಟುಗಳಿಗೆ ಅನ್ವಯವಾಗಲಿದೆ.ಈ ಹೊಸ ನಿಯಮಗಳು ಜುಲೈ 1, 2026 ರಿಂದ ಜಾರಿಗೆ ಬರಲಿವೆ
ಯಾರಿಗೆ ಅನ್ವಯ?:
ಈ ನಿಯಮಗಳು ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತವೆ (ಸಣ್ಣ ಫೈನಾನ್ಸ್ ಬ್ಯಾಂಕ್‌ಗಳು, ಪಾವತಿ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಹೊರತುಪಡಿಸಿ).ಒಬ್ಬ ಗ್ರಾಹಕನನ್ನು ವಂಚಿಸಿ ಅಥವಾ ಬೆದರಿಸಿ (Coercion) ಹಣ ಕಳುಹಿಸುವಂತೆ ಮಾಡಿದರೆ ಅಥವಾ ಮೋಸದಿಂದ ಕ್ರೆಡೆನ್ಶಿಯಲ್ಸ್ ಪಡೆದು ಹಣ ದೋಚಿದರೆ ಅದನ್ನು ವಂಚನೆಯ ವಹಿವಾಟು ಎಂದು ಪರಿಗಣಿಸಲಾಗುತ್ತದೆ.
ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇರಿದಂತೆ ಎಟಿಎಂ ವಹಿವಾಟುಗಳಲ್ಲಿ ನಡೆಯುವ ವಂಚನೆಗಳಿಗೆ ಈ ಹೊಸ ನಿಯಮಗಳು ರಕ್ಷಣೆ ನೀಡುತ್ತವೆ,ಸಣ್ಣ ಹಣಕಾಸು ಬ್ಯಾಂಕುಗಳು, ಪಾವತಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಈ ನಿಯಮದ ಅಡಿಯಲ್ಲಿ ಬರಲಿವೆ.
ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟುಗಳು ನಡೆದಾಗ ಗ್ರಾಹಕರು ಹೊರಬೇಕಾದ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಸೀಮಿತಗೊಳಿಸುವ ನಿಟ್ಟಿನಲ್ಲಿ ಆರ್‌ಬಿಐ ಹಿಂದಿನ ನಿಯಮಗಳನ್ನು ಪರಿಷ್ಕರಿಸಿದೆ. ಇದರಿಂದ ವಂಚನೆಗೊಳಗಾದ ಸಾಮಾನ್ಯ ಜನರಿಗೆ ಬ್ಯಾಂಕ್‌ಗಳಿಂದ ಹೆಚ್ಚಿನ ಬೆಂಬಲ ಮತ್ತು ಸುರಕ್ಷತೆ ಸಿಗುವ ನಿರೀಕ್ಷೆಯಿದೆ.
ಬ್ಯಾಂಕುಗಳು ಸುರಕ್ಷಿತ ವ್ಯವಸ್ಥೆಯನ್ನು ಹೊಂದಿರದಿದ್ದರೆ ಅಥವಾ ವಹಿವಾಟಿನ ಅಲರ್ಟ್ ನೀಡದಿದ್ದರೆ ಅದನ್ನು ಬ್ಯಾಂಕಿನ ಲೋಪವೆಂದು ಪರಿಗಣಿಸಲಾಗುತ್ತದೆ. ಪಾವತಿ ಗೇಟ್‌ವೇ ಅಥವಾ ಟೆಲಿಕಾಂ ಸಂಸ್ಥೆಗಳ ಕಡೆಯಿಂದ ದೋಷ ಉಂಟಾದರೆ ಅದನ್ನು ‘ಥರ್ಡ್ ಪಾರ್ಟಿ ಬ್ರೀಚ್’ ಎಂದು ಕರೆಯಲಾಗುತ್ತದೆ.

