HomeIndiaಮಾ. 31ರಂದು ರಜೆ ಇಲ್ಲ, ಎಂದಿನಂತೆ ವಹಿವಾಟು ನಡೆಸಲು ಎಲ್ಲ ಬ್ಯಾಂಕುಗಳಿಗೆ RBI ಸೂಚನೆ

ಮಾ. 31ರಂದು ರಜೆ ಇಲ್ಲ, ಎಂದಿನಂತೆ ವಹಿವಾಟು ನಡೆಸಲು ಎಲ್ಲ ಬ್ಯಾಂಕುಗಳಿಗೆ RBI ಸೂಚನೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ರಂದು ಸೋಮವಾರ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ವಹಿವಾಟು ಇರುತ್ತದೆ. ಹಣಕಾಸು ವರದಿ ವ್ಯತ್ಯಾಸಗಳನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಲ್ಲಾ ಬ್ಯಾಂಕುಗಳಿಗೆ RBI ನಿರ್ದೇಶನ ನೀಡಿದೆ.

ಮಾರ್ಚ್ 31 ರಂದು ರಂಜಾನ್ ಹಬ್ಬ ಇದೆ. ಹೀಗಾಗಿ ಮಿಜೋರಾಂ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಬಹುತೇಕ ಎಲ್ಲಾ ರಾಜ್ಯಗಳಿಗೂ ಮಾರ್ಚ್ 31ರಂದು ರಜೆ ಇರಬೇಕಿತ್ತು. ಆದರೆ, ಅದೇ ದಿನ ಹಣಕಾಸು ವರ್ಷದ ಕೊನೆಯ ದಿನವಾಗಿರುವುದರಿಂದ ಸ್ವೀಕೃತಿ ಮತ್ತು ಪಾವತಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸಂಬಂಧಿತ ಹಣಕಾಸು ವಹಿವಾಟಿನ ಲೆಕ್ಕವನ್ನು ಖಚಿತಪಡಿಸಿಕೊಳ್ಳಬೇಕಿರುವುದರಿಂದ ಈ ನಿರ್ದೇಶನ ನೀಡಿರುವುದಾಗಿ RBI ತಿಳಿಸಿದೆ. ಮಾರ್ಚ್ 31 ರಂದು ಎಂದಿನಂತೆ ವಹಿವಾಟು ಇರುತ್ತದೆ. ರಜೆ ಇರುವುದಿಲ್ಲ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular