HomeEntertainmentವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಸಮಾರಂಭಕ್ಕೆ ಬಂದ ರಶ್ಮಿಕಾ: ನಟಿಯ ರಾಯಲ್ ಲುಕ್‌ಗೆ ಅಭಿಮಾನಿಗಳು ಫಿದಾ

ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಸಮಾರಂಭಕ್ಕೆ ಬಂದ ರಶ್ಮಿಕಾ: ನಟಿಯ ರಾಯಲ್ ಲುಕ್‌ಗೆ ಅಭಿಮಾನಿಗಳು ಫಿದಾ

ಸೊಂಟದ ಗಾಯದಿಂದ ಚೇತರಿಸಿಕೊಂಡ ಬಳಿಕ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಖ್ಯಾತ ನಿರ್ಮಾಪಕ ನಿರಂಜನ್ ರೆಡ್ಡಿ ಅವರ ಪುತ್ರನ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಅವರು ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಾರ್ಯಕ್ರಮದ ಸ್ಥಳಕ್ಕೆ ರಶ್ಮಿಕಾ ಮತ್ತು ವಿಜಯ್ ಜೋಡಿಯಾಗಿ ಕೈ ಕೈ ಹಿಡಿದುಕೊಂಡು ಆಗಮಿಸಿದರು. ಈ ವೇಳೆ ರಶ್ಮಿಕಾ ತೊಟ್ಟಿದ್ದ ಸುರೀನಾ ಚೌಧರಿ ವಿನ್ಯಾಸದ ವೈನ್ ರೆಡ್ ಹಾಗೂ ಹಸಿರು ಬಣ್ಣ ಸಂಯೋಜನೆಯ ವೆಲ್ವೆಟ್ ಅನಾಕರ್ಲಿ ಡ್ರೆಸ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಡ್ರೆಸ್‌ನಲ್ಲಿದ್ದ ಕುತ್ತಿಗೆ ಭಾಗದ ಸೂಕ್ಷ್ಮ ವಿನ್ಯಾಸ, ಗೋಲ್ಡನ್ ಬಾರ್ಡರ್ ಮತ್ತು ಜರಿ ಕೆಲಸದ ಶೈಲಿ ರಶ್ಮಿಕಾ ಅವರ ಸಾಂಪ್ರದಾಯಿಕ ಲುಕ್‌ಗೆ ವಿಶೇಷ ಮೆರಗು ನೀಡಿತ್ತು.

ಇದಕ್ಕೆ ತಕ್ಕಂತೆ ರಶ್ಮಿಕಾ ಧರಿಸಿದ್ದ ವಜ್ರದ ಹಾರ, ಸರಳವಾದ ಬ್ರೇಸ್ಲೆಟ್ ಹಾಗೂ ನ್ಯಾಚುರಲ್ ಮೇಕ್ ಅಪ್ ಅವರ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡಿತ್ತು. ರಶ್ಮಿಕಾ ಅವರಿಗೆ ಸಾಥ್ ನೀಡಿದ ವಿಜಯ್ ದೇವರಕೊಂಡ ಕಪ್ಪು ಬಣ್ಣದ ರಾಯಲ್ ಬಂದ್‌ಗಾಲಾ ಜಾಕೆಟ್ ಹಾಗೂ ಟಾಪರ್ಡ್ ಟ್ರೌಸರ್ ಧರಿಸಿ ಕ್ಲಾಸಿಕ್ ಲುಕ್‌ನಲ್ಲಿ ಮಿಂಚಿದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಫೋಟೋಗಳು ಹಾಗೂ ವೀಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“>


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular