HomeBusinessಪೋಸ್ಟ್‌ ಆಫೀಸ್‌ನಲ್ಲಿ ₹5 ಲಕ್ಷ ಹೂಡಿಕೆ: 5 ವರ್ಷಗಳ ಬಳಿಕ ಸಿಗುವ ಮೆಚ್ಯೂರಿಟಿ ಮೊತ್ತ ಎಷ್ಟು?

ಪೋಸ್ಟ್‌ ಆಫೀಸ್‌ನಲ್ಲಿ ₹5 ಲಕ್ಷ ಹೂಡಿಕೆ: 5 ವರ್ಷಗಳ ಬಳಿಕ ಸಿಗುವ ಮೆಚ್ಯೂರಿಟಿ ಮೊತ್ತ ಎಷ್ಟು?

ಮಾರುಕಟ್ಟೆಯ ಏರಿಳಿತಗಳ ಆತಂಕವಿಲ್ಲದೆ, ಸುರಕ್ಷಿತ ಹಾಗೂ ಖಾತ್ರಿ ರಿಟರ್ನ್ಸ್ ಬಯಸುವ ಹೂಡಿಕೆದಾರರಿಗೆ ಅಂಚೆ ಕಚೇರಿಯ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (POTD) ಅತ್ಯುತ್ತಮ ಆಯ್ಕೆಯಾಗಿದೆ. ಬ್ಯಾಂಕ್‌ಗಳ ಫಿಕ್ಸ್ಡ್ ಡೆಪಾಸಿಟ್ (FD) ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 1 ರಿಂದ 5 ವರ್ಷಗಳಲ್ಲಿ ಎಷ್ಟು ಆದಾಯ ಸಿಗಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಅಂಚೆ ಕಚೇರಿಯ ಟೈಮ್ ಡೆಪಾಸಿಟ್‌ಗೆ ನೀಡಲಾಗುವ ಬಡ್ಡಿದರವನ್ನು ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಶೀಲಿಸಿ ನಿಗದಿಪಡಿಸುತ್ತದೆ. ಇಲ್ಲಿ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಸಂಯೋಜಿಸಿ ವಾರ್ಷಿಕವಾಗಿ ಲೆಕ್ಕಹಾಕಲಾಗುತ್ತದೆ.

₹5 ಲಕ್ಷ ಹೂಡಿಕೆಗೆ ಮೆಚ್ಯೂರಿಟಿ ಲೆಕ್ಕಾಚಾರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ವರ್ಷದ ಹೂಡಿಕೆ: 6.9% ಬಡ್ಡಿದರ ₹35,403 ಬಡ್ಡಿ ಮೆಚ್ಯೂರಿಟಿ ₹5,35,403

2 ವರ್ಷದ ಹೂಡಿಕೆ: 7.0% ಬಡ್ಡಿದರ ₹74,441 ಬಡ್ಡಿ ಮೆಚ್ಯೂರಿಟಿ ₹5,74,441

3 ವರ್ಷದ ಹೂಡಿಕೆ: 7.1% ಬಡ್ಡಿದರ ₹1,17,538 ಬಡ್ಡಿ ಮೆಚ್ಯೂರಿಟಿ ₹6,17,538

5 ವರ್ಷದ ಹೂಡಿಕೆ: 7.5% ಬಡ್ಡಿದರ ₹2,24,974 ಬಡ್ಡಿ ಮೆಚ್ಯೂರಿಟಿ ₹7,24,974

ಹೂಡಿಕೆಯ ಪ್ರಮುಖ ನಿಯಮಗಳು:

ಕನಿಷ್ಠ ಹೂಡಿಕೆ: ಕೇವಲ ₹1,000 ನೀಡಿಯೂ ಖಾತೆ ತೆರೆಯಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ.

ಬಡ್ಡಿ ಪಾವತಿ: ECS ಸೌಲಭ್ಯ ಬಳಸಿಕೊಂಡು ವಾರ್ಷಿಕ ಬಡ್ಡಿ ಮೊತ್ತವನ್ನು ನೇರವಾಗಿ ನಿಮ್ಮ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಉಳಿತಾಯ ಖಾತೆಗೆ ಜಮಾ ಮಾಡಿಕೊಳ್ಳಬಹುದು.

ಅವಧಿಗೆ ಮುನ್ನ ಹಿಂಪಡೆಯುವಿಕೆ: ಹೂಡಿಕೆ ಮಾಡಿದ 6 ತಿಂಗಳವರೆಗೆ ಹಣವನ್ನು ಹಿಂಪಡೆಯಲು ಅವಕಾಶವಿರುವುದಿಲ್ಲ. 5 ವರ್ಷದ ಟಿಡಿಯನ್ನು 4 ವರ್ಷಕ್ಕಿಂತ ಮೊದಲು ಕ್ಲೋಸ್ ಮಾಡಲು ಬರುವುದಿಲ್ಲ. ಒಂದು ವೇಳೆ 4 ವರ್ಷದ ನಂತರ ಮುಚ್ಚಿದರೆ ಸಾಮಾನ್ಯ ಉಳಿತಾಯ ಖಾತೆಯ ಬಡ್ಡಿದರ ಮಾತ್ರ ಅನ್ವಯಿಸುತ್ತದೆ.

ಆದಾಯ ತೆರಿಗೆ ವಿನಾಯಿತಿ

ನೀವು 5 ವರ್ಷಗಳ ಅವಧಿಯ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿದರೆ, ಹಳೆಯ ತೆರಿಗೆ ಪದ್ಧತಿಯ (Old Tax Regime) ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಪ್ರಕಾರ ವಾರ್ಷಿಕ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 1, 2 ಮತ್ತು 3 ವರ್ಷದ ಡೆಪಾಸಿಟ್‌ಗಳಿಗೆ ಈ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular