HomeEntertainmentಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕಿದೆಯೆಂದು ಕನ್ನಡತಿಯಾಗಿ ಕನ್ನಡ ನಾಡನ್ನೇ ಮರೆತರೆ ಹೇಗೆ? ನಟಿ ರಶ್ಮಿಕಾ ಮಂದಣ್ಣ...

ಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕಿದೆಯೆಂದು ಕನ್ನಡತಿಯಾಗಿ ಕನ್ನಡ ನಾಡನ್ನೇ ಮರೆತರೆ ಹೇಗೆ? ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕರವೇ ನಾರಾಯಣಗೌಡ ಕಿಡಿ

ಬೆಂಗಳೂರು: ನಾನು ಹೈದರಾಬಾದ್ ನವಳು ಎಂದಿದ್ದ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕರವೇ ನಾರಾಯಣ ಗೌಡ, ನಟಿ ರಶ್ಮಿಕಾ ಮಂದಣ್ಣ ಕನ್ನಡಿದಂದ ಹೋಗಿ ಈಗ ಬೇರೆ ಭಾಷೆಯ ಸಿನಿಮಾ ಮಾಡುತ್ತಿದ್ದಾರೆ. ಕೊಡಗಿನ ರಶ್ಮಿಕಾ ಅಪ್ಪಟ ಕನ್ನಡದ ಹೆಣ್ಣುಮಗಳು. ಆಂಧ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದನ್ನು ನೋಡಿದ್ದೇನೆ. ನಾನು ತೆಲುಗಿನ ಆಂಧ್ರಪ್ರದೇಶದವರು ಎಂದಿದ್ದಾರೆ. ಕನ್ನಡದವರಾಗಿ ಕನ್ನಡ ನಾಡನ್ನೇ ಮರೆತರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ನೀವು ಚಿಗುರಿದಷ್ಟು ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕಿದೆ. ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೀರಿ ಎಂದು ಕನ್ನಡ ನಾಡನ್ನೇ ಮರೆತರೆ ನೀವೆಂತಹ ಮೀರ್ ಸಾಧಿಕ್ ಇರಬೇಕು ಎನ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಈ ನೆಲದ ಋಣ ತೀರಿಸಬೇಕು. ಇನ್ನಾದರೂ ಕುವೆಂಪು ಹೇಳಿದ ಮಾತು ಅರ್ಥಮಾಡಿಕೊಳ್ಳಿ. ‘ಎಲ್ಲೇ ಇರು, ಹೇಗೆ ಇರು ಎಂದೆಂದಿಗೂ ಕನ್ನಡವಾಗಿರು’ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular