HomeIndiaಹಲ್ಲಿಯನ್ನೇ ನುಂಗಿದ ಯುವತಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿ: ಕಾರಣ ಗೊತ್ತಾ…?

ಹಲ್ಲಿಯನ್ನೇ ನುಂಗಿದ ಯುವತಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿ: ಕಾರಣ ಗೊತ್ತಾ…?

ಕಾನ್ಪುರ: ಕಾನ್ಪುರದಲ್ಲಿ ಅತ್ಯಾಚಾರ ಆರೋಪಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಲ್ಲಿಯನ್ನು ನುಂಗಿದ್ದಾನೆ. ಹದಿಹರೆಯದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿ ಜೈಲಿಗೆ ಹೋಗಲು ಇಷ್ಟವಿಲ್ಲದ ಕಾರಣ ಪೊಲೀಸ್ ಕಸ್ಟಡಿಯಲ್ಲಿ ಹಲ್ಲಿಯನ್ನು ನುಂಗಿದ್ದಾನೆ.

ಆತನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಅವನನ್ನು ಭಿತರ್‌ ಗಾಂವ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿಂದ ವೈದ್ಯರು ಅವನನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನ್ 14 ರಂದು, ಸಾಧ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯ ನಿವಾಸಿಯಾದ ಹುಡುಗಿಯ ತಂದೆ, ತಮ್ಮ 18 ವರ್ಷದ ಮಗಳನ್ನು ತಮ್ಮ ಸಂಬಂಧಿಕರ ಮಹಿಳೆಯೊಬ್ಬರು ಕರೆದೊಯ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಂತರ ಪೊಲೀಸರು ಬಾಲಕಿಯ ಸ್ಥಳವನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿದರು. ಪೊಲೀಸ್ ತಂಡ ವ್ಯಕ್ತಿಯನ್ನು ಹಿಡಿದು ಭಾನುವಾರ ಹುಡುಗಿಯನ್ನು ರಕ್ಷಿಸಿದೆ. ವಿಚಾರಣೆ ವೇಳೆ ವ್ಯಕ್ತಿ ತನ್ನನ್ನು ಫತೇಪುರ್ ಜಿಲ್ಲೆಯ ಕಿಶನ್‌ಪುರ ಗ್ರಾಮದ ನಿವಾಸಿ ಮಹೇಶ್ ಕುಮಾರ್(24) ಎಂದು ಗುರುತಿಸಲಾಗಿದೆ.

ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಇದಾದ ನಂತರ ಆರೋಪಿ ಮಹೇಶ್ ಲಾಕಪ್ ನಲ್ಲಿದ್ದ ಹಲ್ಲಿಯನ್ನು ಹಿಡಿದು ತಿಂದಿದ್ದಾನೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular