HomeLatest NewsRanji Trophy 2026 Semifinal: ಇಬ್ಬರ ಶತಕ, ಒಬ್ಬನ ದ್ವಿಶತಕ; ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಚಂಡ ಮುನ್ನಡೆ...

Ranji Trophy 2026 Semifinal: ಇಬ್ಬರ ಶತಕ, ಒಬ್ಬನ ದ್ವಿಶತಕ; ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಚಂಡ ಮುನ್ನಡೆ ಸಾಧಿಸಿದ ಕರ್ನಾಟಕ

ರಣಜಿ ಟ್ರೋಫಿ 2025-26ರ ಪ್ರಥಮ ಸೆಮಿಫೈನಲ್ ಪಂದ್ಯದ ನಾಲ್ಕನೇ ದಿನದಾಟ ಇಂದು ( ಫೆಬ್ರವರಿ 18 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಸೆಣಸಾಟ ನಡೆಸುತ್ತಿವೆ.

ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದ್ದು, ಕರ್ನಾಟಕ ಬರೋಬ್ಬರಿ 503 ರನ್‌ಗಳ ಪ್ರಚಂಡ ಮುನ್ನಡೆಯನ್ನು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಕೆಎಲ್ ರಾಹುಲ್ ಹಾಗೂ ಸ್ಮರಣ್ ರವಿಚಂದ್ರನ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅಬ್ಬರದ ದ್ವಿಶತಕದ ನೆರವಿನಿಂದ 194.4 ಓವರ್‌ಗಳಲ್ಲಿ 736 ರನ್‌ಗೆ ಆಲ್‌ಔಟ್ ಆಗಿತ್ತು. ಅತ್ತ ಉತ್ತರಾಖಂಡ 88.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲ್‌ಔಟ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಮೊದಲ ಇನ್ನಿಂಗ್ಸ್: ಕೆಎಲ್ ರಾಹುಲ್ 141, ಮಯಾಂಕ್ ಅಗರ್ವಾಲ್ 5, ದೇವದತ್ ಪಡಿಕ್ಕಲ್ 232, ಕರುಣ್ ನಾಯರ್ 60, ಸ್ಮರಣ್ ರವಿಚಂದ್ರನ್ 135, ಶ್ರೇಯಸ್ ಗೋಪಾಲ್ ಡಕ್‌ಔಟ್, ಕೃತಿಕ್ ಕೃಷ್ಣ 60, ವಿದ್ಯಾಧರ್ ಪಟೇಲ್ 54, ವಿಜಯ್‌ಕುಮಾರ್ ವೈಶಾಖ್ ಡಕ್‌ಔಟ್, ಶಿಖರ್ ಶೆಟ್ಟಿ 12 ಹಾಗೂ ಪ್ರಸಿದ್ಧ್ ಕೃಷ್ಣ ಅಜೇಯ 1 ರನ್ ದಾಖಲಿಸಿದರು.

ಉತ್ತರಾಖಂಡದ ಪರ ಆದಿತ್ಯ ರಾವತ್ ನಾಲ್ಕು ವಿಕೆಟ್, ಮಯಾಂಕ್ ಮಿಶ್ರಾ ಮೂರು ವಿಕೆಟ್, ಅಭಯ್ ನೇಗಿ, ಅವ್ನೀಶ್ ಸುಧಾ ಹಾಗೂ ಲಕ್ಷ್ಯ ರಾಜೇಶ್ ರಾಯ್‌ಚಾಂದನಿ ತಲಾ ಒಂದೊಂದು ವಿಕೆಟ್ ಪಡೆದರು.

ಉತ್ತರಾಖಂಡ ಮೊದಲ ಇನ್ನಿಂಗ್ಸ್: ಭುಪೆನ್ ಲಲ್ವಾನಿ 15, ಪ್ರಶಾಂತ್ ಚೋಪ್ರಾ 5, ಅವ್ನೀಶ್ ಸುಧಾ 27, ಲಕ್ಷ್ಯ ರಾಜೇಶ್ ರಾಯ್‌ಚಾಂದನಿ 55, ನಾಯಕ ಕುನಾಲ್ ಚಾಂಡೆಲಾ 12, ಜಗದೀಶ ಸುಚಿತ್ 21, ಸೌರಭ್ ರಾವತ್ 14, ಅಭಯ್ ನೇಗಿ 9, ಮಯಾಂಕ್ ಮಿಶ್ರಾ 10, ಜನ್‌ಮೆಜಯ್ ಜೋಶಿ 11 ಹಾಗೂ ಆದಿತ್ಯ ರಾವತ್ ಅಜೇಯ 45 ರನ್ ಕಲೆಹಾಕಿದರು.

ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ ಹಾಗೂ ವಿಜಯ್‌ ಕುಮಾರ್ ವೈಶಾಖ್ ತಲಾ ಮೂರು ವಿಕೆಟ್, ಶ್ರೇಯಸ್ ಗೋಪಾಲ್ ಎರಡು ವಿಕೆಟ್, ಪ್ರಸಿದ್ಧ್ ಕೃಷ್ಣ ಹಾಗೂ ಶಿಖರ್ ಶೆಟ್ಟಿ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular