HomeKarnatakaರಂಗಾಯಣದಿಂದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ರಂಗ ತರಬೇತಿ ಬೇಸಿಗೆ ಶಿಬಿರ

ರಂಗಾಯಣದಿಂದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ರಂಗ ತರಬೇತಿ ಬೇಸಿಗೆ ಶಿಬಿರ

ಶಿವಮೊಗ್ಗ ರಂಗಾಯಣವು ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳಿಗಾಗಿ ರಂಗ ತರಬೇತಿ ಶಿಬಿರ ‘ಚಿಣ್ಣರ ಸಿಹಿಮೊಗೆ-2026’ ಎಂಬ ಹೆಸರಿನಲ್ಲಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏಪ್ರಿಲ್ 14 ರಿಂದ ಮೇ 03 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ.

 ಶಿಬಿರದಲ್ಲಿ ಅನುಭವವಿರುವ ಕರ್ನಾಟಕದ ಕ್ರೀಯಾಶೀಲ ರಂಗನಿರ್ದೇಶಕರು, ರಂಗಭೂಮಿಯ ನೇಪಥ್ಯ ಕೆಲಸಗಳಲ್ಲಿ ಪರಿಣಿತರಾಗಿರುವ ಸಾಧಕರು, ವಿವಿಧ ಕಲಾಕ್ಷೇತ್ರಗಳಲ್ಲಿ ಪರಿಣಿತ ಹೊಂದಿರುವ ರಾಜ್ಯದ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.

ನಾಟಕ, ಹೋಳಿ, ರಂಗಾಟ, ರಂಗಗೀತೆ, ಜನಪದ ಆಟ, ಮಣ್ಣಿನ ಆಟ, ಮ್ಯಾಜಿಕ್ ಷೋ, ಮಕ್ಕಳ ಸಂತೆ, ರಂಗಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವೀಕ್ಷಣೆ, ಪ್ರವಾಸ, ಮಡಿಕೆ ತಯಾರಿ, ಪರಿಸರದ ಜೊತೆ ಒಡನಾಟ, ಹೊರಸಂಚಾರ ಹೀಗೆ ಹಲವು ಮಜಲುಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತಾ ನಾಟಕಕ್ಕೆ ಸಂಬಂಧಿತ ಪೂರಕ ಕಲೆಗಳನ್ನು ಶಿಬಿರದಲ್ಲಿ ಕಲಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿಬಿರದ ಕೊನೆಯ ಎರಡು ದಿನಗಳು ಮೇ 02 ಮತ್ತು 03 ರಂದು ಶಿಬಿರದಲ್ಲಿ ಕಲಿಸಿದ ನಾಟಕಗಳನ್ನು, ಕಲೆಗಳನ್ನು ರಂಗಾಯಣದ ‘ಚಿಣ್ಣರ ಸಿಹಿಮೊಗೆ’ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಒಟ್ಟು 150 ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ ಮೊದಲು ಬಂದವರಿಗೆ ಮೊದಲ ಆದ್ಯತೆ.

ಮೊದಲು ಟೋಕನ್ ಪಡೆದವರು ಅರ್ಜಿಯನ್ನು ಏಪ್ರಿಲ್ 9 ರಂದು ಶಿವಮೊಗ್ಗದ ರಂಗಾಯಣ ಕಚೇರಿಯಲ್ಲಿ ಪಡೆದು, ತಕ್ಷಣವೇ ಭರ್ತಿ ಮಾಡಿ ಸ್ಥಳದಲ್ಲಿಯೇ ಅರ್ಜಿ ಮತ್ತು ಪ್ರವೇಶ ಶುಲ್ಕ ರೂ. 3 ಸಾವಿರ ಗಳನ್ನು ನಗದು ರೂಪದಲ್ಲಿ ಪಾವತಿಸಿ ಪ್ರವೇಶ ಪ್ರಕ್ರಿಯೆಯನ್ನು ಮುಗಿಸಿ ಅದಕ್ಕೆ ರಶೀದಿ ಪಡೆಯಬೇಕು. ಪ್ರವೇಶ ಪಡೆಯಲು 2 ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಜನನ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ಪ್ರತಿ ಕಡ್ಡಾಯವಾಗಿದ್ದು, ಮಕ್ಕಳ ವಯೋಮಿತಿ 8 ರಿಂದ 13 ವರ್ಷದೊಳಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ರಂಗಾಯಣ ಕಚೇರಿ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಇವರನ್ನು ಅಥವಾ ಕಚೇರಿ ದೂ. ಸಂ: 08182-256353 ನ್ನು ಸಂಪರ್ಕಿಸಬಹುದಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular