HomeKarnatakaBIG NEWS: ದೇಶಕ್ಕೆ ಹಿಡಿದ ಶನಿ ಎಂದರೆ ಅದು ಮೋದಿ; ಮಾಜಿ ಸ್ಪೀಕರ್ ರಮೇಶ್ ಕುಮಾರ್...

BIG NEWS: ದೇಶಕ್ಕೆ ಹಿಡಿದ ಶನಿ ಎಂದರೆ ಅದು ಮೋದಿ; ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ

ಕೋಲಾರ: ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ರಾಜಕೀಯ ನಾಯಕರು ಭಾಷಣ ಮಾಡುವ ಬರದಲ್ಲಿ ಮಾತಿನ ಹಿಡಿತ ತಪ್ಪುತ್ತಿದ್ದು, ವಿದಾಗಳನ್ನು ಸೃಷ್ಟಿಸುತ್ತಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ದೇಶಕ್ಕೆ ಹಿಡಿದಿರುವ ಶನಿ ಎಂದರೆ ಅದು ಮೋದಿ. ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಜೂನ್ 4ರ ಫಲಿತಾಂಶದಂದು ಶನಿ ಬಿಟ್ಟು ಹೋಗಲಿ ಎಂದು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಲಾರದಲ್ಲಿ ಚುನಾವಣಾ ಪ್ರಚಾರ ನಡೆಸಿದ ರಮೇಶ್ ಕುಮಾರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಲ್ಲಾ ವರ್ಗದವರಿಗೂ ಆತ್ಮಸ್ಥೈರ್ಯ ತಂದುಕೊಟ್ಟರು. ಅಂಥವರ ಸ್ಥಾನಕ್ಕೆ ಎಂಥವನು ಬಂದು ಕೂತಿದ್ದಾನೆ. ಈ ದೇಶಕ್ಕೆ ಹಿಡಿದ ಶನಿ ಅಂದರೆ ಅದು ಮೋದಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸ್ಪೀಕರ್ ಹೇಳಿಕೆಗೆ ಬಿಜೆಪಿ ನಾಯಕರು ಕೆಂಡ ಕಾರಿದ್ದು, ಕಾಂಗ್ರೆಸ್ ಈ ದೇಶಕ್ಕೆ ಹಿಡಿದಿರುವ ಶನಿ. ಅದಕ್ಕೇ ಜನ ಈ ಹಿಂದೆ ಸೋಲಿಸಿದ್ದು. ರಮೇಶ್ ಕುಮಾರ್ ತಮ್ಮ ಘನತೆಗೆ ತಕ್ಕ ಮಾತನಾಡಬೇಕು ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular