HomeEntertainmentಯುದ್ಧಭೂಮಿಯಲ್ಲಿ ಸೀತಾ ದೇವಿ: ಪ್ರೇಕ್ಷಕರ ಎದೆಯಲ್ಲಿ ಕುತೂಹಲ ಹೆಚ್ಚಿಸಿದ 'ರಾಮಾಯಣ' ಚಿತ್ರದ ಹೊಸ ದೃಶ್ಯಗಳು

ಯುದ್ಧಭೂಮಿಯಲ್ಲಿ ಸೀತಾ ದೇವಿ: ಪ್ರೇಕ್ಷಕರ ಎದೆಯಲ್ಲಿ ಕುತೂಹಲ ಹೆಚ್ಚಿಸಿದ ‘ರಾಮಾಯಣ’ ಚಿತ್ರದ ಹೊಸ ದೃಶ್ಯಗಳು

ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ಸದ್ಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರತಂಡವು ಇತ್ತೀಚೆಗಷ್ಟೇ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನಟ ರಣಬೀರ್ ಕಪೂರ್, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೀಶ್ ತಿವಾರಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಜಲಕ್‌ನಲ್ಲಿ ಸಾಯಿ ಪಲ್ಲವಿ ಅವರ ಸಾಹಸ ಸನ್ನಿವೇಶಗಳು ಸೇರ್ಪಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಸಾಮಾನ್ಯವಾಗಿ ಪರದೆಯ ಮೇಲೆ ಸೀತಾ ದೇವಿಯ ಶಾಂತ ಸ್ವರೂಪವನ್ನು ಕಾಣುತ್ತಿದ್ದ ಪ್ರೇಕ್ಷಕರಿಗೆ, ಈ ಸಿನಿಮಾದಲ್ಲಿ ಸೀತೆಯನ್ನು ಒಬ್ಬ ವಾರಿಯರ್ ಅಥವಾ ಯೋಧೆಯ ರೂಪದಲ್ಲಿ ಬಿಂಬಿಸಿರುವುದು ವಿಶೇಷ ಅನುಭವ ನೀಡಿದೆ. ಸಾಯಿ ಪಲ್ಲವಿ ಅವರ ಈ ಮಾಸ್ ಮತ್ತು ಆಕ್ಷನ್ ಅವತಾರಕ್ಕೆ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ನಿತೀಶ್ ತಿವಾರಿ ಅವರು ಸೀತಾ ದೇವಿಯ ಈ ಅಪರೂಪದ ಸಾಹಸಮಯ ಮಗ್ಗಲನ್ನು ತೆರೆಯ ಮೇಲೆ ತರುತ್ತಿರುವುದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಚಿತ್ರದ ಮೊದಲ ಟ್ರೇಲರ್ ಜುಲೈನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇತ್ತೀಚೆಗೆ ಹೊರಬಂದ ಎರಡನೇ ಟ್ರೇಲರ್‌ನ ದೃಶ್ಯ ವೈಭವ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ, ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಗಂಭೀರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಹಾಕಾವ್ಯ ಆಧಾರಿತ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗವು ಈ ವರ್ಷದ ನವೆಂಬರ್ 5 ರಂದು ಪ್ರಪಂಚದಾದ್ಯಂತ ತೆರೆಕಾಣಲಿದ್ದು, ಎರಡನೇ ಭಾಗವು ಮುಂದಿನ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಪ್ರದರ್ಶನದ ಹಿಂದಿನ ದಿನ ಅಂದರೆ ನವೆಂಬರ್ 4 ರಂದೇ ಸಾವಿರಾರು ಸ್ಪೆಷಲ್ ಶೋಗಳನ್ನು ಆಯೋಜಿಸಲು ಚಿತ್ರತಂಡ ಯೋಜಿಸುತ್ತಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular