HomeEntertainmentಗಮನ ಸೆಳೆಯುತ್ತಿದೆ 'ಅಪ್ಪು ಗ್ಯಾರೇಜ್' ಟ್ರೇಲರ್: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ನಿರೀಕ್ಷೆ

ಗಮನ ಸೆಳೆಯುತ್ತಿದೆ ‘ಅಪ್ಪು ಗ್ಯಾರೇಜ್’ ಟ್ರೇಲರ್: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ನಿರೀಕ್ಷೆ

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಗೆಯ ಕಥೆಗಳನ್ನಿಟ್ಟುಕೊಂಡು ಬರುತ್ತಿರುವ ಯುವ ಪ್ರತಿಭೆಗಳ ಸಾಲಿಗೆ ‘ಅಪ್ಪು ಗ್ಯಾರೇಜ್’ ಸಿನಿಮಾ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಅಪ್ಪು ಗ್ಯಾರೇಜ್ ಎಂಬ ವಿಶಿಷ್ಟ ಶೀರ್ಷಿಕೆಯೊಂದಿಗೆ ಮೂಡಿಬರುತ್ತಿರುವ ಈ ಚಿತ್ರದಲ್ಲಿ ವಿಷ್ಣು ತೇಜ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಜೀವನ್, ಮನ್ಮೋಹನ್ ರಾಯ್, ಯಶವಂತ್ ಬಿಜೂರ್, ನಿತೀಶ್, ಜೂನಿಯರ್ ಅಪ್ಪು ಹಾಗೂ ರಾಬಿನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ಹಾಗೂ ಅಭಿನಯದ ದೃಷ್ಟಿಯಿಂದ ಈ ಯುವ ತಂಡದ ಪ್ರಯತ್ನ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಈ ಸಿನಿಮಾಗೆ ಚಂದ್ರಚೂಡೇಶ್ವರರಾಜು ಅವರೇ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಅಲ್ಲದೆ ಸೃಜನಶೀಲ ವಿಭಾಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಮರ್ ನಾರಾಯಣ ರಾಜ ಸಹ-ನಿರ್ದೇಶಕರಾಗಿ ಸಾಥ್ ನೀಡಿದ್ದು, ರಾಮಕ್ಕ ರಾಜ್, ವೇಲನ್, ಹರ್ಷ್, ಪಾಲಿಮರ್ ವೆಂಕಟೇಶ್, ಜಾಕಿ ಹಾಗೂ ಪ್ರಕಾಶ್ ಅವರನ್ನೊಳಗೊಂಡ ನಿರ್ದೇಶನ ತಂಡ ಕಾರ್ಯನಿರ್ವಹಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದ ಹಾಡುಗಳಿಗೆ ಡಾ. ಮಾರುತಿ ನಿಡಘಟ್ಟ ಪುಟ್ಟರಾಜು ಸಾಹಿತ್ಯ ಬರೆದಿದ್ದು, ಎಸ್.ಕೆ. ಸಾಯಿ ಶ್ಯಾಮ್ (ಕುಟ್ಟಿ) ಸಂಗೀತ ಸಂಯೋಜಿಸಿದ್ದಾರೆ. ಎಂ. ಶಂಕರ್ ಅವರ ಛಾಯಾಗ್ರಹಣ ಹಾಗೂ ರುದ್ರೇಶ್ ಲಕ್ಯಾ ಅವರ ಸಂಕಲನ ಚಿತ್ರಕ್ಕಿದೆ. ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದರೆ, ಕೌರವ ವೆಂಕಟೇಶ್ ಮತ್ತು ಬಂಡೆ ಚಂದ್ರು ಸಾಹಸ ಸನ್ನಿವೇಶಗಳನ್ನು ಸಂಯೋಜಿಸಿದ್ದಾರೆ.

ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ಸದ್ಯದಲ್ಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular