HomeKarnataka600 ಅಡಿ ಎತ್ತರದ ಬೆಟ್ಟದ ಮೇಲೆ ಬೃಹತ್ 60 ಅಡಿ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ...

600 ಅಡಿ ಎತ್ತರದ ಬೆಟ್ಟದ ಮೇಲೆ ಬೃಹತ್ 60 ಅಡಿ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ ಸಾರಿದ ಯುವಕರು

ರಾಮನಗರ: ಇಂದು ದೇಶದಾದ್ಯಂತ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲೆಡೆ ವಿಜೃಂಭಣೆಯಿಂದ ಸಂಭ್ರಮಾಚರಣೆ ಮಾಡಲಾಗುತ್ತಿದೆ. ರಾಮನಗರದಲ್ಲಿ ಯುವಕರು ವಿಶಿಷ್ಠ ರೀತಿಯಲ್ಲಿ ತ್ರಿವರ್ಣಧ್ವಜ ಹಾರಿಸುವ ಮೂಲಕ ದೇಶಭಕ್ತಿ ಸಾರಿದ್ದಾರೆ.

ರಾಮನಗರದ ಕೆಲ ಯುವಕರ ತಂಡ 600 ಅಡಿ ಎತ್ತರದ ಬೆಟ್ಟದ ಮೇಲೆ 60 ಅಡಿ ತ್ರಿವರ್ಣಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುಂಜಾನೆಯೇ ಬೆಟ್ಟವನ್ನು ಏರಿದ ಸಚಿನ್ ಹಾಗೂ ಅವರ ತಂಡ 60 ಅಡಿ ಉದ್ದದ ತ್ರಿವರ್ಣಧ್ವಜವನ್ನು 600 ಅಡಿ ಎತ್ತರದ ಬೆಟ್ಟದ ಮೇಲೆ ಹಾರಿಸಿದ್ದಾರೆ.

ಈ ಯುವಕರ ಗುಂಪು ಪ್ರತಿವರ್ಷವೂ ಈ ಬೆಟ್ಟದ ಮೇಲೆ ಧಜಾರೋಹಣ ನೆರವೇರಿಸುತ್ತದೆ. ಪ್ರತಿ ವರ್ಷವೂ ಇವರು ಹಾರಿಸುವ ಬಾವುಟವನ್ನು 5 ಅಡಿ ಎತ್ತರ ಹೆಚ್ಚಿಸಿಕೊಂಡು ಹೋಗುತ್ತಾರೆ. ಈ ವರ್ಷವೂ ಸಚಿನ್ ಹಾಗೂ ಸ್ನೇಹಿತರು ಬೆಟ್ಟದ ಮೇಲೆ ಬೃಹತ್ ತ್ರಿವರ್ಣಧ್ವಜ ಹಾರಿಸಿ, ರಾಷ್ಟ್ರಗೀತೆಯನು ಹಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular