HomeEntertainmentರಕ್ಷಾಬಂಧನದ ಶುಭದಿನದಂದು ಕಹಿ ಮರೆತ ಕಂಗನಾ-ರಾಮ್‌ದೇವ್: ಹಿರಿಯ ಸಹೋದರನ ಪ್ರೀತಿಯ ಉಡುಗೊರೆ ಸ್ವೀಕರಿಸಿದ ಸಂಸದೆ!

ರಕ್ಷಾಬಂಧನದ ಶುಭದಿನದಂದು ಕಹಿ ಮರೆತ ಕಂಗನಾ-ರಾಮ್‌ದೇವ್: ಹಿರಿಯ ಸಹೋದರನ ಪ್ರೀತಿಯ ಉಡುಗೊರೆ ಸ್ವೀಕರಿಸಿದ ಸಂಸದೆ!

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವೆ ಇದ್ದ ಗಂಭೀರ ಭಿನ್ನಾಭಿಪ್ರಾಯಗಳಿಗೆ ಕೊನೆಗೂ ತೆರೆಬಿದ್ದಿದೆ. ರಕ್ಷಾಬಂಧನದ ಪವಿತ್ರ ದಿನದಂದು ಇಬ್ಬರೂ ತಮ್ಮ ನಡುವಿನ ಹಳೆ ವೈಷಮ್ಯವನ್ನು ಮರೆತು ಸೌಹಾರ್ದತೆಯ ಹಸ್ತ ಚಾಚಿದ್ದಾರೆ.

ಹಬ್ಬದ ಅಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಬಾ ರಾಮ್‌ದೇವ್, ಕಂಗನಾ ರನೌತ್ ಅವರಿಗೆ ಸಿಹಿ ತಿಂಡಿ ಹಾಗೂ ವಿಶೇಷ ಉಡುಗೊರೆ ಕಳುಹಿಸಿಕೊಡುವುದಾಗಿ ತಿಳಿಸಿದ್ದರು. ದೇಶದಲ್ಲಿ ಯಾರ ಮೇಲೆಯೂ ದ್ವೇಷ ಅಥವಾ ವೈರತ್ವ ಇರಬಾರದು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದರು.

ಬಾಬಾ ರಾಮ್‌ದೇವ್ ಅವರ ಈ ನಿರ್ಧಾರವನ್ನು ಕಂಗನಾ ಮುಕ್ತಮನಸ್ಸಿನಿಂದ ಸ್ವಾಗತಿಸಿದ್ದಾರೆ. ಹಬ್ಬದ ದಿನವೆಂದರೆ ಹಳೆ ತಪ್ಪುಗಳನ್ನು ಮರೆತು ಕ್ಷಮಿಸುವ ದಿನ. ಸಂವಾದದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನನ್ನ ಹಿರಿಯ ಸಹೋದರ ಬಾಬಾ ರಾಮ್‌ದೇವ್ ಹೇಳಿರುವುದು ಅರ್ಥಪೂರ್ಣವಾಗಿದೆ. ಅವರ ಪ್ರೀತಿ ಹಾಗೂ ಸಿಹಿಯನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಕಂಗನಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಕಂಗನಾ ಅವರ ಹೇಳಿಕೆ ಮತ್ತು ಪತಂಜಲಿ ಸಂಸ್ಥೆಯ ಮೇಲಿನ ವಿವಾದಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದು ಭಾರೀ ಸದ್ದು ಮಾಡಿದ್ದವು. ಆದರೆ ಈಗ ರಕ್ಷಾಬಂಧನದ ಸಂದರ್ಭದಲ್ಲಿ ಇಬ್ಬರೂ ಹಳೆಯ ಕಹಿ ಘಟನೆಗಳನ್ನು ಮರೆತು ಒಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular