HomeEntertainmentಮತ್ತೊಮ್ಮೆ ಗೊಳೋ ಎಂದು ಅತ್ತ ರಾಖಿ ಸಾವಂತ್....!

ಮತ್ತೊಮ್ಮೆ ಗೊಳೋ ಎಂದು ಅತ್ತ ರಾಖಿ ಸಾವಂತ್….!

ಮದುವೆಯಾದಾಗಿನಿಂದ ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ವೈವಾಹಿಕ ಜೀವನ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಮದುವೆ ವಿಚಾರಕ್ಕೆ ಮತ್ತೊಮ್ಮೆ ಬಹಿರಂಗವಾಗಿ ಕಣ್ಣೀರು ಹಾಕಿದ್ದಾರೆ.‌

ರಾಖಿ ಸಾವಂತ್ ಇತ್ತೀಚೆಗಷ್ಟೇ ಮುಂಬೈನಲ್ಲಿರುವ ತನ್ನ ಜಿಮ್‌ನಿಂದ ಹೊರಬರುತ್ತಿದ್ದರು. ಈ ವೇಳೆ ‘ಮೇರಿ ಶಾದಿ ಖತ್ರೇ ಮೇ ಹೈ’ ( ನನ್ನ ಮದುವೆ ತೊಂದರೆಯಲ್ಲಿದೆ) ಎಂದು ಪಾಪರಾಜಿಗಳ ಮುಂದೆ ಅಳಲು ತೋಡಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನೇನು ತಪ್ಪು ಮಾಡಿದೆ ದೇವರೇ, ನನ್ನ ತಾಯಿ ನನ್ನನ್ನು ಬಿಟ್ಟು ಹೋದಳು. ಮದುವೆ ಎಂದರೆ ಜೋಕ್ ಅಲ್ಲ, ನನ್ನ ದಾಂಪತ್ಯವನ್ನು ಮುರಿಯಲು ಬಯಸುವವರೂ ಇದ್ದಾರೆ. ನನ್ನ ಮದುವೆಗೆ ಏನಾದರೂ ಕೆಟ್ಟದಾದರೆ.. ಈ ಕುತಂತ್ರದಲ್ಲಿ ಯಾರಿದ್ದಾರೋ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನನ್ನ ಜೀವನದ ಬಗ್ಗೆ ನಾನು ದೇಶದ ಜನರ ಮುಂದಿಡುತ್ತೇನೆ ಎಂದು ಕಣ್ಣೀರು ಹಾಕಿದರು.

ರಾಖಿ ಸಾವಂತ್ ತಾಯಿ ಜಯಾ ಅವರು ಜನವರಿ 28 ರಂದು ಮುಂಬೈ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಿಧನರಾದರು.

For Latest News Updates, Join Our Whatsapp Community🚩
RELATED ARTICLES

Most Popular