HomeKarnatakaಶಿಡ್ಲಘಟ್ಟ, ಮಂಗಳೂರು, ಗೋವಾ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜೀವ್‌ ಗೌಡ ಓಡಾಟ, ಸಿದ್ದರಾಮಯ್ಯ ಗರಂ

ಶಿಡ್ಲಘಟ್ಟ, ಮಂಗಳೂರು, ಗೋವಾ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜೀವ್‌ ಗೌಡ ಓಡಾಟ, ಸಿದ್ದರಾಮಯ್ಯ ಗರಂ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ಭೀತಿಯಿಂದ ಊರೂರು ಅಲೆಯುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪೊಲೀಸರು ಬಂಧಿಸುವ ಭೀತಿಯಲ್ಲಿ ರಾಜೀವ್ ಗೌಡ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ.

12 ದಿನಗಳಿಂದ ಶಿಡ್ಲಘಟ್ಟದ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕಾಲಿಗೆ ಚಕ್ರ ಕಟ್ಟಿಕೊಡಂತೆಂ ಓಡಾಡುತ್ತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಗರಂ ಆಗಿದ್ದು, ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಎರಡು ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟದ ಎರಡು ಮನೆಗಳಿಗೆ ಬೀಗ ಹಾಕಿ ಪತ್ನಿ ಜೊತೆ ಪರಾರಿಯಾಗಿದ್ದಾರೆ. ಅವರು ಮಂಗಳೂರಿನ ತೋಟದ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ತೋಟದ ಮನೆ ಕಾಂಗ್ರೆಸ್ ನಾಯಕನಿಗೆ ಸೇರಿದ್ದು ಎಂಬ ವರದಿಗಳು ಈಗ ಸಿಎಂಗೆ ತಲುಪಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರೀಕ್ಷಣಾ ಜಾಮೀನು ಪಡೆಯಲು ಕೋರ್ಟ್ ಮೊರೆ ಹೋಗಿದ್ದ ರಾಜೀವ್‌ ಗೌಡ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಕೋರ್ಟ್‌ ರಾಜೀವ್‌ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಆದ್ದರಿಂದ ರಾಜೀವ್ ಗೌಡ ಬಂಧಿಸುವುದು ಮಾತ್ರ ಬಾಕಿ ಇದೆ.

ಗೋವಾದಲ್ಲಿ ರಾಜೀವ್ ಗೌಡ?: ಶಿಡ್ಲಘಟ್ಟದಿಂದ ರಾಜೀವ್‌ ಗೌಡ ಮಂಗಳೂರು ನಗರಕ್ಕೆ ಪರಾರಿಯಾಗಿದ್ದ. ಆದರೆ ಕಾನೂನು ಹೋರಾಟ ವಿಫಲವಾದ ಕಾರಣ ಆತ ಗೋವಾಕ್ಕೆ ಪರಾರಿಯಾಗಿದ್ದಾನೆ ಎಂದು ಅಂದಾಜಿಸಲಾಗಿದೆ.

ಶಿಡ್ಲಘಟ್ಟದ ರಾಜೀವ್ ಗೌಡ ನಿವಾಸಕ್ಕೆ 3 ನೋಟಿಸ್ ಅಂಟಿಸಿ ಬಂದಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿ ಬಂಧಿಸಲು 12 ದಿನಗಳು ಬೇಕೆ? ಎಂದು ಸಿದ್ದರಾಮಯ್ಯ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.

ಚಿಕ್ಕಬಳ್ಳಾಪುರ ಪೊಲೀಸರು ರಾಜೀವ್ ಗೌಡ ಬಂದು ಶರಣಾಗಬೇಕು ಎಂದು ಕಾಯುತ್ತಿದ್ದಾರೆ. ಅಲ್ಲದೇ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಲುಕ್ ಔಟ್ ನೋಟಿಸ್ ಜಾರಿಗೊಳಿಸುವ ನಿರೀಕ್ಷೆ ಇದೆ.

ರಾಜೀವ್‌ ಗೌಡನನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಶಾಕ್ ಕೊಟ್ಟಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಕಾರ್ಯ ವೈಖರಿಸಿದ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಕೂಡಲೇ ಬಂಧಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ರಾಜೀವ್ ಗೌಡ ಮಂಗಳೂರಿನಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ ಪೊಲೀಸರು ಮಂಗಳೂರು ತಲುಪುದರಲ್ಲಿ ಆತ ರೈಲಿನ ಮೂಲಕ ಅಲ್ಲಿಂದ ತೆರಳಿದ್ದಾನೆ. ಪೊಲೀಸರು ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ.

ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಮಾತನಾಡಿ, “ರಾಜೀವ್ ಗೌಡ ನಟೋರಿಯಸ್ ಕ್ರಿಮಿನಲ್. ಆತನ ವಿರುದ್ದ ಒಟ್ಟು 16 ಪ್ರಕರಣಗಳಿವೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದೇವೆ. ಆದಷ್ಟು ಬೇಗ ಬಂಧಿಸುತ್ತೇವೆ” ಎಂದು ಹೇಳಿದ್ದಾರೆ.

ಜನ ಸಾಮಾನ್ಯರಿಗೆ ಒಂದು ನ್ಯಾಯ, ಕಾಂಗ್ರೆಸ್ ಮುಖಂಡನಿಗೆ ಒಂದು ನ್ಯಾಯ. ಒಬ್ಬನನ್ನು ಬಂಧಿಸಲು 12 ದಿನ ಬೇಕೆ? ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಟೀಕೆಗಳನ್ನು ಮಾಡಿವೆ. ಆದ್ದರಿಂದ ಪೊಲೀಸರ ಮೇಲೆಯೂ ಒತ್ತಡ ಹೆಚ್ಚಾಗುತ್ತಿದೆ.

ಕಳೆದ ವಾರ ರಾಜೀವ್ ಗೌಡ ಕಾಣೆಯಾಗಿದ್ದಾನೆ ಎಂದು ಪೋಸ್ಟ್ ಹಾಕುವ ಮೂಲಕ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರ, ಕರ್ನಾಟಕ ಪೊಲೀಸರ ವಿರುದ್ಧ ಟೀಕೆಗಳನ್ನು ಮಾಡಿತ್ತು. ಆದರೆ ಪೊಲೀಸರು ಇನ್ನೂ ಸಹ ಆತನನ್ನು ಬಂಧಿಸಲು ವಿಫಲವಾಗಿದೆ. ಬೇರೆ ರಾಜ್ಯದಲ್ಲಿ ಆತ ಅಡಗಿದ್ದರೆ ಪೊಲೀಸರು ಬಂಧಿಸಲು ಇನ್ನೆಷ್ಟು ದಿನ ಬೇಕು? ಎಂದು ಅವರೇ ಉತ್ತರಿಸಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular