HomeEntertainmentಅಡ್ಡಲಾಗಿ ನಿಲ್ಲಿಸಿದ್ದ ಕಾರಿಗೆ ಥಾರ್‌ನಿಂದ ಗುದ್ದಿ ದಾರಿ ಮಾಡಿಕೊಂಡ ರಜತ್ ದಲಾಲ್: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ...

ಅಡ್ಡಲಾಗಿ ನಿಲ್ಲಿಸಿದ್ದ ಕಾರಿಗೆ ಥಾರ್‌ನಿಂದ ಗುದ್ದಿ ದಾರಿ ಮಾಡಿಕೊಂಡ ರಜತ್ ದಲಾಲ್: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್!

ಬಿಗ್ ಬಾಸ್ ಖ್ಯಾತಿಯ ಫಿಟ್‌ನೆಸ್ ಇನ್ಫ್ಲುಯೆನ್ಸರ್ ರಜತ್ ದಲಾಲ್ ತಮ್ಮ ಮಹೀಂದ್ರಾ ಥಾರ್ ವಾಹನದಿಂದ ಮತ್ತೊಂದು ಕಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ರಸ್ತೆ ತೆರವುಗೊಳಿಸಿರುವ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಫರೀದಾಬಾದ್‌ನ ಸೆಕ್ಟರ್ 16ರ ಜಿಮ್ ಒಂದರ ಮುಂಭಾಗದಲ್ಲಿ ರಜತ್ ದಲಾಲ್ ಅವರ ಥಾರ್ ಕಾರಿನ ಮುಂದೆ ಹಾಗೂ ಹಿಂದೆ ಇತರ ಕಾರುಗಳನ್ನು ಅಡ್ಡಲಾಗಿ ಪಾರ್ಕ್ ಮಾಡಲಾಗಿತ್ತು. ಇದರಿಂದ ತಮ್ಮ ವಾಹನವನ್ನು ಹೊರತೆಗೆಯಲು ಸಾಧ್ಯವಾಗದೆ ಸತತ 45ರಿಂದ 50 ನಿಮಿಷಗಳ ಕಾಲ ಕಾದ ರಜತ್, ಕೊನೆಗೆ ತಾಳ್ಮೆ ಕಳೆದುಕೊಂಡು ತಮ್ಮ ಥಾರ್ ಕಾರಿನಿಂದ ಮುಂಭಾಗದಲ್ಲಿದ್ದ ಸೆಡಾನ್ ಕಾರಿಗೆ ಸತತವಾಗಿ ಗುದ್ದಿ ಅದನ್ನು ಮುಂದೆ ತಳ್ಳುವ ಮೂಲಕ ದಾರಿ ಮಾಡಿಕೊಂಡು ತೆರಳಿದ್ದಾರೆ. ಈ ಇಡೀ ದೃಶ್ಯವನ್ನು ವೀಡಿಯೊ ಮಾಡಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ವೈರಲ್ ಆಗಿ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ರಜತ್ ದಲಾಲ್, ಇದು ಯಾವುದೇ ಪ್ರಚಾರದ ಗಿಮಿಕ್ ಅಲ್ಲ ಎಂದು ಹೇಳಿದ್ದಾರೆ. ವಾಹನ ಅಡ್ಡವಿಟ್ಟಿದ್ದ ಚಾಲಕ ತನ್ನ ಫೋನ್ ಸಂಖ್ಯೆಯನ್ನು ಕೂಡ ಕಾರಿನ ಮೇಲೆ ಬರೆದಿಟ್ಟಿರಲಿಲ್ಲ. ನಿತ್ಯವೂ ಈ ರೀತಿಯ ಅಸಮರ್ಪಕ ಪಾರ್ಕಿಂಗ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪ್ರತಿಯೊಬ್ಬರೂ ಪಾರ್ಕಿಂಗ್ ಮಾಡುವಾಗ ಇತರರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular