HomeIndia1,285 ರೂಪಾಯಿಗೆ ಬುಕ್ ಮಾಡಿದ ಕ್ಯಾಬ್‌ಗೆ 5,662 ರೂ. ಬಿಲ್: 240 ಕಿ.ಮೀ ಹೆಚ್ಚುವರಿ ಸೇರಿಸಿ...

1,285 ರೂಪಾಯಿಗೆ ಬುಕ್ ಮಾಡಿದ ಕ್ಯಾಬ್‌ಗೆ 5,662 ರೂ. ಬಿಲ್: 240 ಕಿ.ಮೀ ಹೆಚ್ಚುವರಿ ಸೇರಿಸಿ ಗ್ರಾಹಕರಿಗೆ ಶಾಕ್!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಲಾ ರೆಂಟ್ ಕ್ಯಾಬ್ ಕಾಯ್ದಿರಿಸಿದ್ದ ಪ್ರಯಾಣಿಕರೊಬ್ಬರಿಗೆ ಕೊನೆಯಲ್ಲಿ ಭಾರಿ ಮೊತ್ತದ ಬಿಲ್ ನೀಡುವ ಮೂಲಕ ಶಾಕ್ ನೀಡಲಾಗಿದೆ. ಕೇವಲ 1,285 ರೂಪಾಯಿಗೆ ಬುಕ್ ಮಾಡಿದ್ದ ಕ್ಯಾಬ್‌ಗೆ ಪ್ರಯಾಣ ಮುಗಿದ ನಂತರ ಹೆಚ್ಚುವರಿಯಾಗಿ 240 ಕಿಲೋಮೀಟರ್ ಸಂಚರಿಸಲಾಗಿದೆ ಎಂದು ಹೇಳಿ ಒಟ್ಟು 5,662 ರೂಪಾಯಿ ಬಿಲ್ ನೀಡಲಾಗಿದೆ.

ದೆಹಲಿಯ ಮಹಿಪಾಲಪುರದ ಹೋಟೆಲ್ ಒಂದರಿಂದ ಬೆಳಗ್ಗೆ 10 ಗಂಟೆಗೆ ಯಶೋಭೂಮಿಯಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನಕ್ಕೆ ತೆರಳಲು ಪ್ರಯಾಣಿಕರು 6 ಗಂಟೆ ಮತ್ತು 60 ಕಿಲೋಮೀಟರ್ ಪರಿಮಿತಿಯ ಓಲಾ ರೆಂಟ್ ಕ್ಯಾಬ್ ಬುಕ್ ಮಾಡಿದ್ದರು. ವಸ್ತುಪ್ರದರ್ಶನ ವೀಕ್ಷಿಸಿದ ಬಳಿಕ ಮಧ್ಯಾಹ್ನ 3:45ರ ಸುಮಾರಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ ಪ್ರಯಾಣ ಮುಕ್ತಾಯಗೊಳಿಸಿದರು. ಆದರೆ, ಸವಾರಿ ಮುಗಿದಾಗ ಸಂಸ್ಥೆಯು ನೀಡಿದ ಬಿಲ್ ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ತಾವು ಚಲಿಸದೇ ಇದ್ದರೂ ಹೆಚ್ಚುವರಿಯಾಗಿ 240.5 ಕಿಲೋಮೀಟರ್ ಸಂಚಾರ ಮಾಡಲಾಗಿದೆ ಎಂದು ತೋರಿಸಿ, ಟೋಲ್ ಹಾಗೂ ಇತರ ಶುಲ್ಕಗಳನ್ನು ಸೇರಿಸಿ 5,662 ರೂಪಾಯಿ ಬಿಲ್ ವಿಧಿಸಲಾಗಿತ್ತು. ಈ ಕುರಿತು ಸಂಸ್ಥೆಯ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದರೂ ತಕ್ಷಣಕ್ಕೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಂತ್ರಸ್ತ ಪ್ರಯಾಣಿಕರು ರೆಡ್ಡಿಟ್ ಜಾಲತಾಣದಲ್ಲಿ ಸಂಪೂರ್ಣ ವಿವರವನ್ನು ಹಂಚಿಕೊಂಡು ಸಲಹೆ ಕೋರಿದ್ದಾರೆ. ಆನ್‌ಲೈನ್ ಕ್ಯಾಬ್ ಬುಕಿಂಗ್ ಮಾಡುವಾಗ ಆರಂಭಿಕ ದರದ ಸ್ಕ್ರೀನ್‌ಶಾಟ್ ಇಟ್ಟುಕೊಳ್ಳುವುದು, ಪ್ರಯಾಣದ ಮಾರ್ಗವನ್ನು ಗಮನಿಸುವುದು ಮತ್ತು ಸಮಸ್ಯೆಯಾದಾಗ ಗ್ರಾಹಕ ವೇದಿಕೆಗೆ ದೂರು ನೀಡುವುದು ಸೂಕ್ತ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular