HomeKarnatakaಇಸ್ಲಾಂ ಧರ್ಮ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ: ಸಿಎಂ ಡಿ.ಕೆ.ಶಿವಕುಮಾರ್ ರಿಂದ 6ನೇ ಗ್ಯಾರಂಟಿ: ಹಿಂದೂಗಳಿಗೆ...

ಇಸ್ಲಾಂ ಧರ್ಮ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ: ಸಿಎಂ ಡಿ.ಕೆ.ಶಿವಕುಮಾರ್ ರಿಂದ 6ನೇ ಗ್ಯಾರಂಟಿ: ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿʼ: ಆರ್.ಅಶೋಕ್ ಲೇವಡಿ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಇಸ್ಲಾಂ ಧರ್ಮ ಶ್ರೇಷ್ಠ ಎಂದು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್‌.ಅಶೋಕ್‌ ಸಿಎಂ ಡಿ.ಕೆ.ಶಿವಕುಮಾರ್ ರಿಂದ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿʼ ಎಂದು ಲೇವಡಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಶಿವಕುಮಾರ್ ಅವರೇ, ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ನಾಟಕ ಆಡುವ ನಿಮಗೆ, ಅಧಿಕಾರ ಸಿಕ್ಕ ಮೇಲೆ ನಿಮ್ಮದೇ ಸಂಪುಟದ ಸಚಿವರು ಅದೇ ಹಿಂದೂ ಧರ್ಮವನ್ನು ಅವಹೇಳನ ಮಾಡಿದಾಗ ಮೌನ ವಹಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸಂಪುಟದ ಸಚಿವ ಬಸವರಾಜ ರಾಯರೆಡ್ಡಿ ಅವರು ‘ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ’ ಎಂದು ಬಹಿರಂಗವಾಗಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಇಡೀ ರಾಜ್ಯಾದ್ಯಂತ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಧರ್ಮದ ಬಗ್ಗೆ ಯಾರಿಗಾದರೂ ಅವರವರ ವೈಯಕ್ತಿಕ ನಂಬಿಕೆ ಇರಬಹುದು. ಆದರೆ, ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದುಕೊಂಡು ಕೋಟ್ಯಂತರ ಹಿಂದೂಗಳ ಆರಾಧನೆ, ಪವಿತ್ರ ಮಠ-ಮಾನ್ಯಗಳು ಮತ್ತು ಸನಾತನ ಪರಂಪರೆಯ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರ ಮತ್ತು ಹಿಂದೂ ಧರ್ಮದ ಮೇಲಿನ ಬಹಿರಂಗ ದಾಳಿ, ಹಿಂದೂಗಳ ಶ್ರದ್ಧೆ, ನಂಬಿಕೆಗಳಿಗೆ ಮಾಡಿರುವ ಘೋರ ಅಪಮಾನ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಕೋಟ್ಯಂತರ ಹಿಂದೂಗಳಿಗೆ ರಾಯರೆಡ್ಡಿ ಅವರ ಅವಹೇನಕಾರಿ ಹೇಳಿಕೆಗಿಂತಲೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜಾಣ ಮೌನವೇ ಹೆಚ್ಚಿನ ಆಕ್ರೋಶ ತರಿಸುತ್ತಿದೆ. ನಿಮ್ಮ ಈ ಮೌನವೇ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡುತ್ತಿದೆ. ಹಿಂದೂಗಳ ಭಾವನೆ ನಜ್ಜುಗುಜ್ಜಾದರೂ ಚಿಂತೆಯಿಲ್ಲ, ಓಲೈಕೆ ರಾಜಕಾರಣಕ್ಕಾಗಿ ಸಚಿವರನ್ನು ಮಾತ್ರ ರಕ್ಷಿಸಬೇಕು. ಇದೇ ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಅಸಲಿ ಮುಖವಲ್ಲವೇ ಎಂದು ಕಿಡಿಕಾರಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಅವರೇ , ಈಗ ನಿಮಗಿದು ಅಗ್ನಿಪರೀಕ್ಷೆ. ರಾಯರೆಡ್ಡಿ ಅವರ ಈ ಹಿಂದೂ ವಿರೋಧಿ ಅವಹೇಳನಕಾರಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ. ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಮಾಡಿರುವ ಅವರಿಂದ ತಕ್ಷಣವೇ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಿ. ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ. ಇವೆರಡನ್ನೂ ಮಾಡದಿದ್ದರೆ ರಾಜ್ಯದ ಕೋಟ್ಯಂತರ ಹಿಂದೂಗಳ ಈ ಪ್ರಶ್ನೆಗಳಿಗೆ ನಿಮ್ಮ ಮೌನವೇ ಉತ್ತರವಾಗಲಿದೆ ಎಂದಿದ್ದಾರೆ.

ಸನಾತನ ಧರ್ಮವನ್ನು ನಿಂದಿಸಿದ್ದು ರಾಯರೆಡ್ಡಿ ಅವರ ವೈಯಕ್ತಿಕ ಅಭಿಪ್ರಾಯವೋ? ಅಥವಾ ಇದು ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮ್ಮತಿ ಪಡೆದ hidden ಅಜೆಂಡಾನೋ? ಹಿಂದೂಗಳ ಮತಗಳನ್ನು ಪಡೆದು ಅಧಿಕಾರಕ್ಕೇರಿ, ಅದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ದಿನನಿತ್ಯ ತುಚ್ಛವಾಗಿ ನಿಂದಿಸುವ ಈ ನೀಚ ರಾಜಕಾರಣವನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ. ಹಿಂದೂ ಧರ್ಮ ಮತ್ತು ಮಠ-ಮಾನ್ಯಗಳ ಮೇಲೆ ದಾಳಿಯಾದಾಗ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತುಕೊಳ್ಳುವ ಮುಖ್ಯಮಂತ್ರಿ ಡಿಕೆಶಿ ಅವರು ಈ ಧಾರ್ಮಿಕ ನಿಂದನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ರಾಯರೆಡ್ಡಿ ಅವರು ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular