HomeLatest NewsBREAKING: ಶಾಲೆಯ ಮೇಲ್ಛಾವಣಿ ಕುಸಿದು ಮಕ್ಕಳು ಸೇರಿ 7 ಜನರು ಸಾವು ಪ್ರಕರಣ: ಐವರು ಶಿಕ್ಷಕರು...

BREAKING: ಶಾಲೆಯ ಮೇಲ್ಛಾವಣಿ ಕುಸಿದು ಮಕ್ಕಳು ಸೇರಿ 7 ಜನರು ಸಾವು ಪ್ರಕರಣ: ಐವರು ಶಿಕ್ಷಕರು ಸಸ್ಪೆಂಡ್

ಜೈಪುರ: ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಮಕ್ಕಳು ಸೇರಿ 7 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಿಕ್ಷಕರನ್ನು ಅಮಾನತುಮಾಡಿ ಆದೇಶ ಹೊರಡಿಸಲಾಗಿದೆ.

ರಾಜಸ್ಥಾನದ ಝಲ್ವಾರ್ ನಲ್ಲಿ ನಿನ್ನೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು, 6 ಮಕ್ಕಳು ಹಾಗೂ ಓರ್ವ ಶಿಕ್ಷಕ ಸೇರಿ 7 ಜನರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ಶಾಲೆಯ ಐವರು ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಶಾಲೆ ಶಿಥಿಲಾವಸ್ಥೆಯಲ್ಲಿದ್ದರೂ ನಿರ್ಲಕ್ಷ್ಯ ವಹಿಸಿದ್ದ ಕಾರಣಕ್ಕೆ ಐವರು ಶಿಕ್ಷಕರನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular