HomeLatest NewsBIG NEWS: ಅಲ್ವಾರ್ ನಗರದ ಮನೆಯಲ್ಲಿ ಬಾಂಬ್ ರೀತಿಯ ವಸ್ತು ಪತ್ತೆ: ಚುರುಕುಗೊಂಡ ತನಿಖೆ

BIG NEWS: ಅಲ್ವಾರ್ ನಗರದ ಮನೆಯಲ್ಲಿ ಬಾಂಬ್ ರೀತಿಯ ವಸ್ತು ಪತ್ತೆ: ಚುರುಕುಗೊಂಡ ತನಿಖೆ

ಜೈಪುರ: ರಾಜಸ್ಥಾನದ ಅಲ್ವಾರ್ ನಲ್ಲಿ ಮನೆಯೊಂದರಲ್ಲಿ ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಟೈಮರ್ ಅಳವಡಿಸಲಾದ ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜೈಪುರದ ಭಯೋತ್ಪಾದನಾ ನಿಗ್ರಹ ದಳ ಹಾಗೂ ಬಾಂಬ್ ನಿಷ್ಖ್ರಿಯ ದಳದ ತಂಡಗಳು ಅನುಮಾನಾಸ್ತದ ವಸ್ತುವಿನ ಪರಿಶೀಲನೆ ನಡೆಸಿವೆ.

ರಾಜಸ್ಥಾನದ ಅರಾವಳಿ ವಿಹಾರ್ ಪ್ರದೇಶದ ವಿವೇಕಾನಂದ ನಗರದ ಸೆಕ್ಟರ್ 4ರಲ್ಲಿ ಈ ವಸ್ತು ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಅದನ್ನು ನಗರದಿಂದ ಸಾಮಾರು ಆರೂವರೆ ಕಿ.ಮೀ ದೂರದಲ್ಲಿರುವ ಜೈಸಮಂದ್ ಅಣೆಕಟ್ಟೆ ಪ್ರಸೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶಗಳನ್ನು ಸೀಲ್ ಮಾಡಲಾಗಿದ್ದು, ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular