HomeLatest Newsರೈಲ್ವೆ ಸ್ಟೆಷನ್ ನಲ್ಲಿ ಪ್ರೊಫೆಸರ್ ಹತ್ಯೆ ಪ್ರಕರಣ: ಆರೋಪಿ ಅರೆಸ್ಟ್

ರೈಲ್ವೆ ಸ್ಟೆಷನ್ ನಲ್ಲಿ ಪ್ರೊಫೆಸರ್ ಹತ್ಯೆ ಪ್ರಕರಣ: ಆರೋಪಿ ಅರೆಸ್ಟ್

ಮುಂಬೈ: ರೈಲ್ವೆ ನಿಲ್ದಾಣದಲ್ಲಿಯೇ ಕಾಲೇಜು ಪ್ರೊಫೆಸ್ ಓರ್ವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಅರು ಬಂಧಿಸಿದ್ದಾರೆ.

ವಿಲೇ ಪಾರ್ಲೆಯ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕ ಅಲೋಕ್ ಸಿಂಗ್ ಅವರನ್ನು ಮಲಾಡ್ ರೈಲು ನಿಲ್ದಾಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದ. 27 ವರ್ಷದ ಓಂಕಾರ್ ಶಿಂಧೆ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಾಧ್ಯಾಪಕ ಅಲೋಕ್ ಸಿಂಗ್ ಹಾಗೂ ಆರೋಪಿ ಓಂಕಾರ್ ಶಿಂಧೆ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಕ್ಷುಲ್ಲಕ ವಿಚಾರವಗಿ ಇಬ್ಬರ ನಡುವೆ ಮಾತು ಆರಂಭವಾಗಿ ವಿಕೋಪಕ್ಕೆ ತಿರುಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಕೋಪದ ಬರದಲ್ಲಿ ಆರೋಪಿ ಶಿಂಧೆ, ತನ್ನ ಕೈಲಿದ್ದ ಚಾಕುವಿನಿಂದ ಅಲೋಕ್ ಸಿಂಗ್ ಅವರಿಗೆ ಮನಬಂದಂತೆ ಇರಿದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲೋಕ್ ಸಿಂಗ್ ಅವರ ಹೊಟ್ಟೆಯ ಭಾಗದಲ್ಲಿ ಚಾಕು ಇರಿಯಲಾಗಿತ್ತು. ಗಂಭೀರವಾಗಿ ಹಲ್ಲೆಗೊಳಗಾದ ಅಲೋಕ್ ಸಿಂಗ್ ರೈಲು ನಿಲ್ದಾಣದಲ್ಲಿ ಮೃತಪಟ್ಟಿದ್ದರು. ಘಟನೆ ನಡೆದ ಕೆಲ ಸಮಯದಲ್ಲೇ ವ್ಯಕ್ತಿಯೊಬ್ಬ ರೈಲು ನಿಲ್ದಾಣದ ಪಾದಚಾರಿ ಸೇತುವೆ ಮೇಲಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಬೊರಿವಲಿ ಜಿಆರ್ ಪಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular