HomeCrimeಮಂಗಳೂರು ಬಳಿಕ ರಾಯಚೂರಲ್ಲೂ ಗಾಂಜಾ ಮಿಶ್ರಿತ ಚಾಕೊಲೇಟ್ ದಂಧೆ ಬೆಳಕಿಗೆ

ಮಂಗಳೂರು ಬಳಿಕ ರಾಯಚೂರಲ್ಲೂ ಗಾಂಜಾ ಮಿಶ್ರಿತ ಚಾಕೊಲೇಟ್ ದಂಧೆ ಬೆಳಕಿಗೆ

Raichuru: ಗಾಂಜಾ ಮಿಶ್ರಿತ ಚಾಕಲೇಟ್ ಮಾರಟ- ಇಬ್ಬರು ಆರೋಪಿಗಳ ಬಂಧನ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್

ರಾಯಚೂರು: ಮಂಗಳೂರು ಬಳಿಕ ರಾಯಚೂರಿನಲ್ಲಿಯೂ ಗಾಂಜಾ ಮಿಶ್ರಿತ ಚಾಕೊಲೇಟ್ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ರಾಯಚೂರಿನ ಎಲ್.ಬಿ.ಎಸ್. ನಗರದ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ 2.66 ಕೆಜಿ ಗಾಂಜಾ ಮಿಶ್ರಿತ ಚಾಕೊಲೇಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ನಿರೀಕ್ಷಕ ಹನುಮಂತ ಗುತ್ತೇದಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಳಿಯ ವೇಳೆ 482 ಗಾಂಜಾ ಮಿಶ್ರಿತ ಚಾಕೊಲೇಟ್ ದೊರೆತಿದ್ದು, ರಾಚಯ್ಯಸ್ವಾಮಿ, ಅಮರಯ್ಯ ಸ್ವಾಮಿ ಎಂಬುವರನ್ನು ಬಂಧಿಸಲಾಗಿದೆ. ಇವರು ಉತ್ತರ ಪ್ರದೇಶ ಮೂಲದವರಿಂದ ಚಾಕೊಲೇಟ್ ಗಳನ್ನು ತಂದು ವಿವಿಧ ಬಡಾವಣೆಗಳಲ್ಲಿ 50 ರಿಂದ 100 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular