HomeLatest Newsರಾಯಚೂರು ಪೊಲೀಸರಿಂದ 2 ತಿಂಗಳ ಕಾಲ ನಿರಂತರ ಕಾರ್ಯಾಚರಾಣೆ: ರಾಜಸ್ಥಾನದಲ್ಲಿ 19 ವರ್ಷದ ಕುಖ್ಯಾತ ಸೈಬರ್...

ರಾಯಚೂರು ಪೊಲೀಸರಿಂದ 2 ತಿಂಗಳ ಕಾಲ ನಿರಂತರ ಕಾರ್ಯಾಚರಾಣೆ: ರಾಜಸ್ಥಾನದಲ್ಲಿ 19 ವರ್ಷದ ಕುಖ್ಯಾತ ಸೈಬರ್ ವಂಚಕ ಅರೆಸ್ಟ್

ರಾಯಚೂರು: ರಾಯಚೂರು ಸೈಬರ್ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸುವ ಮೂಲಕ ಕುಖ್ಯಾತ ಸೈಬರ್ ವಂಚಕ 19 ವರ್ಷದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಚೂರು ಸೈಬರ್ ಕ್ರೈಂ ಪೊಲೀಸರು ನಿರಂತರ ಎರಡು ತಿಂಗಳ ಕಾರ್ಯಾಚಾರಣೆ ನಡೆಸಿ, ರಾಜಸ್ಥಾನದಲ್ಲಿ ಸೈಬರ್ ವಂಚಕನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು 19 ವರ್ಷದ ಶಕೀಲ್ ಎಂದು ಗುರುತಿಸಲಾಗಿದೆ. ಈತ ಪೊಲೀಸರು, ಐಎ ಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ.

ಬಂಧಿತ ಶಕೀಲ್ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಚಂದ್ ಬಾಸ್ ಚಿರ್ ಖಾನಾ ಗ್ರಾಮದ ನಿವಾಸಿ. ಆಳ್ವಾರ್ ಹಾಗೂ ಭರತಪುರ ಜಿಲ್ಲೆಗಳು ಸೈಬರ್ ವಂಚಕರ ಕೇಂದ್ರಗಳಾಗಿದ್ದು, ಅಲ್ಲಿ ಗುಂಪುಗಳಾಗಿ ಕುಳಿತು ಆನ್ ಲೈನ್ ವಂಚನೆ ನಡೆಸುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಶಕೀಲ್, ರಾಯಚೂರು ಜಿಲ್ಲಾಧಿಕಾರಿ ನಿತೇಶ್ ಕೆ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ನನ್ನ ಪರಿಚಯದ ಸಬ್ ಇನ್ಸ್ ಪೆಕ್ಟರ್ ವರ್ಗಾವಣೆಯಾಗಿದೆ. ಅವರ ಎಸಿ, ಫ್ರಿಡ್ಜ್, ಮಂಚ ಮೊದಲಾದ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮೆಸೇಜ್ ಕಳುಹಿಸಿ ಜನರಿಂದ ಲಕ್ಷ ಲಕ್ಷ ಹಣ ದೋಚುತ್ತಿದ್ದ. ಈತನ ಸಂದೇಶ ನಂಬಿ ರಾಯಚೂರಿನ ರಮೇಶ್ ಎಂಬುವವರು ಹಣ ಕಳೆದುಕೊಂಡಿದ್ದರು. ಜೂನ್ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಪತ್ತೆ ಮಾಡಲು ಪೊಲೀಸರು ಅಪರಿಚತರಂತೆ ಓಡಾಡಿ, ಸಿನಿಮಾ ಸ್ಟೈಲ್ ನಲ್ಲಿ ಆತನನ್ನು ಬಂಧಿಸಿದ್ದಾರೆ. ಶಕೀಲ್ ಸಹಚರರ ಬಂಧನಕ್ಕಾಗಿ ಮತ್ತೊಮ್ಮೆ ರಾಜಸ್ಥಾನದಲ್ಲಿ ಕಾರ್ಯಾಚರಣೆಗೆ ರಾಯಚೂರು ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular