HomeKarnatakaಮಹಿಳಾ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ; ವಾರ್ಡನ್ ಸಸ್ಪೆಂಡ್

ಮಹಿಳಾ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ; ವಾರ್ಡನ್ ಸಸ್ಪೆಂಡ್

ರಾಯಚೂರು: ರಾಯಚೂರಿನ ಬಿಸಿಎಂ ಮಹಿಳಾ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೇಲ್ ವಾರ್ಡನ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಹಾಸ್ಟೇಲ್ ವಾರ್ಡನ್ ಗಿರಿಜಾ ಅಮಾನತುಗೊಂಡವರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ್, ಕರ್ತವ್ಯಲೋಪ ಹಿನ್ನೆಲೆಯಲ್ಲಿ ವಾರ್ಡನ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದರೂ ನೀರು ಪೂರೈಕೆ ಮಾಡದೇ ಬೇಜವಾಬ್ದಾರಿ ಮೆರೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟಿಸಿದ್ದ ವಿದ್ಯಾರ್ಥಿನಿಯರನ್ನು ಹಾಸ್ಟೇಲ್ ನಿಂದ ಹೊರ ಹಾಕೋದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ವಾರ್ಡನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಹಾಸ್ಟೆಲ್ ಪ್ರಭಾರಿ ವಾರ್ಡನ್ ಆಗಿ ಈರಮ್ಮ ಪತ್ತಾರ ಅವರನ್ನು ನೇಮಕ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular