HomeKarnatakaSHOCKING NEWS: 45 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆ

SHOCKING NEWS: 45 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆ

ರಾಯಚೂರು: ಹೊಲಕ್ಕೆ ಹೋಗಿದ್ದ ವ್ಯಕ್ತಿ 45 ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾದವರು ಇದೀಗ ಅಸ್ಥಿಪಂಜರವಾಗಿ ಪತ್ತೆಯಾಗಿರುವ ಘಟನೆ ರಾಯಚೂರಿನ ಕೊರ್ತಕುಂದ ಗ್ರಾಮದಲ್ಲಿ ನಡೆದಿದೆ.

ಕೊರ್ತಕುಂದ ಗ್ರಾಮದ ರಸೂಲ್ ಸಾಬ್ (45) ಮೃತ ದುರ್ದೈವಿ. 45 ದಿನಗಳ ಹಿಂದೆ ಹೊಲಕ್ಕೆಂದು ಹೋದ ರಸೂಲ್ ಸಾಬ್ ಏಕಾಏಕಿ ನಾಪತೆಯಾಗಿದ್ದರು. ಕುಟುಂಬದವರು ಅವರಿಗಾಗಿ ಹುಡುಕಾಟ ನಡೆಸಿ ಕೊನೆಗೂ ಬೇರೆ ದಾರಿ ಕಾಣದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದೀಗ ಕೊರ್ತಕುಂದ ಗ್ರಾದ ಹೊರಭಾಗದ ದರ್ಗಾಬಳಿ ತಲೆ ಬುರುಡೆಯೊಂದು ಪತ್ತೆಯಾಗಿದೆ. ಈ ಬಗ್ಗೆ ತಿಳಿದ ಪೊಲೀಸರು ದೇಹಕ್ಕಾಗಿ ಹುಡುಕಾಟ ನಡೆಸಿದಾಗ ಬೆಟ್ಟದ ಮೇಲೆ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಚಪ್ಪಲಿ, ಬುರುಡೆ ಮೇಲಿನ ಕೂದಲು, ಬಟ್ಟೆ ಪರಿಶೀಲನೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ರಸೂಲ್ ಸಾಬ್ ಅಸ್ಥಿಪಂಜರ ಎಂಬುದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಟುಂಬದವರು ರಸೂಲ್ ಸಾಬ್ ನನ್ನು ಯಾರೋ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular