HomeRecipiesಮಕ್ಕಳಿಗಾಗಿ ಹೆಲ್ತಿ ಅಂಡ್ ಟೇಸ್ಟಿ ಬ್ರೇಕ್‌ಫಾಸ್ಟ್: ಸುಲಭವಾಗಿ ಮಾಡಿ ರಾಗಿ ಚಾಕೊಲೇಟ್ ಪ್ಯಾನ್‌ಕೇಕ್

ಮಕ್ಕಳಿಗಾಗಿ ಹೆಲ್ತಿ ಅಂಡ್ ಟೇಸ್ಟಿ ಬ್ರೇಕ್‌ಫಾಸ್ಟ್: ಸುಲಭವಾಗಿ ಮಾಡಿ ರಾಗಿ ಚಾಕೊಲೇಟ್ ಪ್ಯಾನ್‌ಕೇಕ್

ರಾಗಿ ಹಿಟ್ಟಿನ ಪೋಷಕಾಂಶ ಹಾಗೂ ಚಾಕೊಲೇಟ್‌ನ ಅದ್ಭುತ ರುಚಿ ಸೇರಿ ತಯಾರಾಗುವ ಈ ಪ್ಯಾನ್‌ಕೇಕ್, ಮಕ್ಕಳಿಗೆ ಉಪಹಾರ ಅಥವಾ ಸಂಜೆಯ ಸ್ನಾಕ್ಸ್ ರೂಪದಲ್ಲಿ ನೀಡಲು ಅತ್ಯುತ್ತಮ ಆಯ್ಕೆಯಾಗಿದೆ. ಆರೋಗ್ಯದ ಜೊತೆಗೆ ನಾಲಿಗೆಗೂ ರುಚಿ ನೀಡುವ ಈ ಖಾದ್ಯವನ್ನು ಸುಲಭವಾಗಿ ಹೇಗೆ ಮಾಡಬಹುದು ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

  • ರಾಗಿ ಹಿಟ್ಟು – 1 ಕಪ್
  • ಕೋಕೋ ಪೌಡರ್ – 2 ದೊಡ್ಡ ಚಮಚ
  • ಸಕ್ಕರೆ – 2 ದೊಡ್ಡ ಚಮಚ
  • ಬೇಕಿಂಗ್ ಪೌಡರ್ – 1 ಚಮಚ
  • ಉಪ್ಪು – ಒಂದು ಚಿಟಿಕೆ
  • ಮೊಟ್ಟೆ – 1 ದೊಡ್ಡದು
  • ಹಾಲು – 1 ಕಪ್
  • ಕರಗಿಸಿದ ಬೆಣ್ಣೆ – 2 ದೊಡ್ಡ ಚಮಚ
  • ವೆನಿಲ್ಲಾ ಎಸೆನ್ಸ್ – 1 ಚಮಚ
  • ಚಾಕೊಲೇಟ್ ಚಿಪ್ಸ್ – ಅರ್ಧ ಕಪ್
  • ಜೇನುತುಪ್ಪ – 2 ದೊಡ್ಡ ಚಮಚ
  • ತಾಜಾ ಹಣ್ಣುಗಳ ಚೂರುಗಳು (ಬಡಿಸಲು)

ತಯಾರಿಸುವ ವಿಧಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಮೊದಲು ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ಕೋಕೋ ಪೌಡರ್, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.
  2. ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆ, ಹಾಲು, ಕರಗಿಸಿದ ಬೆಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ, ಯಾವುದೇ ಗಂಟಿಲ್ಲದಂತೆ ನಯವಾಗಿ ಬ್ಲೆಂಡ್ ಮಾಡಿಕೊಳ್ಳಿ.
  3. ಈಗ ಒಣ ಪದಾರ್ಥಗಳ ಮಿಶ್ರಣಕ್ಕೆ ಈ ದ್ರವ ಮಿಶ್ರಣವನ್ನು ಸುರಿದು ಹದವಾಗಿ ಕಲಸಿಕೊಳ್ಳಿ. ಅತಿಯಾಗಿ ಕಲಸುವ ಅಗತ್ಯವಿಲ್ಲ, ಸಣ್ಣ ಸಣ್ಣ ಗಂಟುಗಳಿದ್ದರೂ ಪರವಾಗಿಲ್ಲ. ಈ ಹಂತದಲ್ಲಿ ಚಾಕೊಲೇಟ್ ಚಿಪ್ಸ್ ಸೇರಿಸಿ ಲಘುವಾಗಿ ಕೈಯಾಡಿಸಿ.
  4. ಮಿಶ್ರಣವು ಚೆನ್ನಾಗಿ ಹೊಂದಿಕೊಳ್ಳಲು ಮತ್ತು ಪ್ಯಾನ್‌ಕೇಕ್‌ಗಳು ಮೃದುವಾಗಿ ಬರಲು ಈ ಹಿಟ್ಟನ್ನು 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ.
  5. ನಂತರ ಒಲೆಯ ಮೇಲೆ ನಾನ್‌ಸ್ಟಿಕ್ ತವಾವನ್ನು ಸಾಧಾರಣ ಉರಿಯಲ್ಲಿ ಕಾಯಿಸಿ, ಅದಕ್ಕೆ ಸ್ವಲ್ಪ ಬೆಣ್ಣೆಯನ್ನು ಸವರಿ. ತವಾ ಕಾದ ಮೇಲೆ ಕಾಲು ಕಪ್‌ನಷ್ಟು ಹಿಟ್ಟನ್ನು ತವಾದ ಮೇಲೆ ಹಾಕಿ ಹರಡಿ.
  6. ಪ್ಯಾನ್‌ಕೇಕ್‌ನ ಮೇಲ್ಭಾಗದಲ್ಲಿ ಸಣ್ಣ ಗುಳ್ಳೆಗಳು ಬರಲು ಆರಂಭಿಸಿ, ಬದಿಗಳು ಗಟ್ಟಿಯಾಗುವವರೆಗೆ ಅಂದರೆ ಸುಮಾರು 3 ರಿಂದ 4 ನಿಮಿಷಗಳ ಕಾಲ ಬೇಯಿಸಿ.
  7. ಬಳಿಕ ಜಾಗರೂಕತೆಯಿಂದ ಪ್ಯಾನ್‌ಕೇಕ್ ಅನ್ನು ತಿರುಗಿಸಿ ಹಾಕಿ, ಇನ್ನೊಂದು ಬದಿ ಕೂಡ ಚೆನ್ನಾಗಿ ಬೆಂದು ತಿಳಿ ಕಂದು ಬಣ್ಣ ಬರುವವರೆಗೆ 3 ರಿಂದ 4 ನಿಮಿಷ ಬೇಯಿಸಿ.
  8. ಚೆನ್ನಾಗಿ ಬೆಂದ ನಂತರ ಪ್ಯಾನ್‌ಕೇಕ್ ಅನ್ನು ತವಾದಿಂದ ತೆಗೆದು ಪ್ಲೇಟ್‌ಗೆ ವರ್ಗಾಯಿಸಿ. ಬಿಸಿಬಿಸಿಯಾದ ಪ್ಯಾನ್‌ಕೇಕ್ ಮೇಲೆ ಜೇನುತುಪ್ಪ ಸವರಿ, ತಾಜಾ ಹಣ್ಣುಗಳ ಚೂರುಗಳು ಅಥವಾ ವಿಪ್ಡ್ ಕ್ರೀಮ್ ಜೊತೆ ಮಕ್ಕಳಿಗೆ ತಿನ್ನಲು ನೀಡಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular