HomeEntertainmentಅಜಿತ್ ಅಭಿನಯದ 'ಡೇರ್ ಡೆವಿಲ್' ಚಿತ್ರಕ್ಕೆ ಶ್ರೀಲೀಲಾ ನಾಯಕಿ: ರೂಮರ್‌ಗಳಿಗೆ ತೆರೆ ಎಳೆದ ನಿರ್ದೇಶಕ!

ಅಜಿತ್ ಅಭಿನಯದ ‘ಡೇರ್ ಡೆವಿಲ್’ ಚಿತ್ರಕ್ಕೆ ಶ್ರೀಲೀಲಾ ನಾಯಕಿ: ರೂಮರ್‌ಗಳಿಗೆ ತೆರೆ ಎಳೆದ ನಿರ್ದೇಶಕ!

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಡೇರ್ ಡೆವಿಲ್’ ಚಿತ್ರದಿಂದ ನಟಿ ಶ್ರೀಲೀಲಾ ಹೊರಬಿದ್ದಿದ್ದಾರೆ ಹಾಗೂ ಅವರ ಜಾಗಕ್ಕೆ ಕಾಯದು ಲೋಹರ್ ಬಂದಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ, ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಿರ್ದೇಶಕ ಪ್ರಸನ್ನ ಅಧಿಕ್ ರವಿಚಂದ್ರನ್ ಬಿಗ್ ಅಪ್‌ಡೇಟ್ ನೀಡುವ ಮೂಲಕ ಸಂಪೂರ್ಣ ತೆರೆ ಎಳೆದಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಅಧಿಕ್ ರವಿಚಂದ್ರನ್, ‘ಡೇರ್ ಡೆವಿಲ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿರುವುದು ನೂರಕ್ಕೆ ನೂರರಷ್ಟು ನಿಜ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಲೀಲಾ ಅವರೊಂದಿಗೆ ತೆಲುಗಿನ ಪ್ರಸಿದ್ಧ ನಟ ಸುನಿಲ್, ಹಿರಿಯ ನಟರಾದ ಪ್ರಭು ಮತ್ತು ಪಾರ್ತಿಬನ್ ಸಹ ಮುಖ್ಯ ಪಾತ್ರಗಳಲ್ಲಿ ಕಂಗೊಳಿಸಲಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಿಂತ ವಿಭಿನ್ನವಾಗಿರುವ ಈ ಚಿತ್ರವು ಪ್ರತಿಯೊಬ್ಬ ಪ್ರೇಕ್ಷಕನಿಗೂ ಸಂಪೂರ್ಣ ಮನರಂಜನೆ ನೀಡುವಂತಹ ಫ್ಯಾಮಿಲಿ ಎಂಟರ್‌ಟೇನರ್ ಆಗಿರಲಿದೆ ಎಂದು ತಿಳಿಸಿದ್ದಾರೆ.

ಈ ವಿಶೇಷ ಶೀರ್ಷಿಕೆಯನ್ನು ಸ್ವತಃ ನಟ ಅಜಿತ್ ಕುಮಾರ್ ಅವರೇ ಸೂಚಿಸಿದ್ದು, ದೀಪಾವಳಿ ಹಬ್ಬದ ನಂತರ ಅಂದರೆ ನವೆಂಬರ್ 12 ರಿಂದ ಹೈದರಾಬಾದ್, ಮಲೇಷ್ಯಾ ಮತ್ತು ಬ್ಯಾಂಕಾಕ್‌ನಲ್ಲಿ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಮೂಲಕ ಅಜಿತ್ ಅವರ ಧರ್ಮಪತ್ನಿ ಶಾಲಿನಿ ಅಜಿತ್ ಕುಮಾರ್ ಅವರು ‘ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular