HomeKarnatakaರಾಧಿಕಾ ಕರಿಯ ಅಂದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ…? ಮತ್ತೆ ವಿವಾದದ ಕಿಡಿ ಹೊತ್ತಿಸಿದ ತೇಜಸ್ವಿನಿ...

ರಾಧಿಕಾ ಕರಿಯ ಅಂದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ…? ಮತ್ತೆ ವಿವಾದದ ಕಿಡಿ ಹೊತ್ತಿಸಿದ ತೇಜಸ್ವಿನಿ ಗೌಡ

ಮೈಸೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಜಮೀರ್ ಅಹಮ್ಮದ್ ಕರಿಯ ಎಂದು ಹೇಳಿದ ವಿಚಾರ ಮತ್ತೆ ವಿವಾದದ ಕಿಡಿ ಹೊತ್ತಿಸಿದೆ.

ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಧಿಕಾ ಕರಿಯ ಅಂತ ಕರೆದರೆ ಓಕೆ, ಆದರೆ ಜಮೀರ್ ಕರೆದ್ರೆ ಆಕ್ಷೇಪವೇಕೆ ಎಂದು ಜಮೀರ್ ಹೇಳಿಕೆ ಸಮರ್ಥಿಸಿಕೊಳ್ಳುವ ಭರದಲ್ಲಿ ತೇಜಸ್ವಿನಿ ಎಡವಟ್ಟು ಮಾಡಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ರಾಧಿಕಾ ಅವರಿಗೆ ಕುಮಾರಸ್ವಾಮಿಯವರು ನಿಮಗೆ ಏನೆಂದು ಕರೆಯುತ್ತಾರೆ ಎಂದಾಗ ಚಿನ್ನು ಎನ್ನುತ್ತಾರೆ ಎಂದು ತಿಳಿಸುತ್ತಾರೆ. ನೀವು ಏನೆಂದು ಕರೆಯುತ್ತೀರಿ ಎಂದಾಗ ಕರಿಯ ಎನ್ನುತ್ತೇನೆ ಎಂದು ಹೇಳುತ್ತಾರೆ. ರಾಧಿಕಾ ಕುಮಾರಸ್ವಾಮಿ ಹೇಳಿದರೆ ಓಕೆ ಜಮೀರ್ ಹೇಳಿದ್ರೆ ಯಾಕೆ ಎಂದು ಕೇಳಿದ ತೇಜಸ್ವಿನಿ ಗೌಡ, ಈಗಂತೂ ಕರಿಯ, ಬಿಳಿಯ ಎಂದೆಲ್ಲಾ ಚರ್ಚೆ ನಡೆಯುತ್ತಿದೆ ಎಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಉಕ್ಕಿನ ಮಹಿಳೆಗೆ ಕಾಂಗ್ರೆಸ್ ಮಹಾನಮನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular