HomeEntertainmentಕೊರಗಜ್ಜನ ಸನ್ನಿಧಿಯಲ್ಲಿ ನಟಿ ರಚಿತಾ ರಾಮ್: ಕೋಲ ಸೇವೆ ನೆರವೆರಿಸಿದ ಡಿಂಪಲ್ ಕ್ವೀನ್

ಕೊರಗಜ್ಜನ ಸನ್ನಿಧಿಯಲ್ಲಿ ನಟಿ ರಚಿತಾ ರಾಮ್: ಕೋಲ ಸೇವೆ ನೆರವೆರಿಸಿದ ಡಿಂಪಲ್ ಕ್ವೀನ್

ಮಂಗಳೂರು: ಸ್ಯಾಂಡಲ್ ವುಡ್ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ತುಳುನಾಡಿಗೆ ಭೇಟಿ ನೀಡಿದ್ದು, ತುಳುನಾಡಿನ ಆರಾಧ್ಯ ದೈವ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ತೆರಳಿರುವ ನಟಿ ರಚಿತಾ ರಾಮ್, ತನ್ನ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ತಾನು ಅಂದುಕೊಂಡ ಕೆಲಸಗಳು ನೆರವೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದ ರಚಿತಾ ರಾಮ್, ಇದೀಗ ಆ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊರಗಜ್ಜ ದೇವರಿಗೆ ವಿಶೇಶ ಪೂಜೆ ಸಲ್ಲಿಸಿದ್ದಾರೆ. ರಚಿತಾ ರಾಮ್ ಸದ್ಯ ಧ್ರುವ ಸರ್ಜಾ ಜೊತೆ ಕ್ರಿಮಿನಲ್, ನಿನಾಸಂ ಸತೀಶ್ ಜೊತೆ ‘ಅಯೋಗ್ಯ 2’ ಸಿನಿಮಾದಲ್ಲಿ ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದೆ. ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular