HomeLive NewsBIG NEWS: ತಮಿಳುನಾಡು ಸಿಎಂ ವಿಜಯ್ ರಾಜ್ಯಕ್ಕೆ ಬರುವುದು ಮಾರಕ: ಯಾವ ಪುರುಷಾರ್ಥಕ್ಕೆ ಬರುತ್ತಾರೆ? ಆರ್.ಅಶೋಕ್...

BIG NEWS: ತಮಿಳುನಾಡು ಸಿಎಂ ವಿಜಯ್ ರಾಜ್ಯಕ್ಕೆ ಬರುವುದು ಮಾರಕ: ಯಾವ ಪುರುಷಾರ್ಥಕ್ಕೆ ಬರುತ್ತಾರೆ? ಆರ್.ಅಶೋಕ್ ಆಕ್ರೋಶ

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡು ಸಿಎಂ ಈಗ ರಾಜ್ಯಕ್ಕೆ ಯಾಕೆ ಬರಬೇಕು? ನಮ್ಮ ರಾಜ್ಯದ ವಿರುದ್ಧ ಮಾತನಾಡಲು ಅವರನ್ನು ಇಲ್ಲಿಗೆ ಕರೆಸುವ ಅವಶ್ಯಕತೆ ಇದೆಯಾ? ಎಂದು ಪ್ರಶ್ನಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ತಮಿಳುನಾಡು ಸಿಎಂ ವಿಜಯ್ ರಾಜ್ಯಕ್ಕೆ ಬರುವುದು ಮಾರಕ. ಯಾವ ಪುರುಷಾರ್ಥಕ್ಕೆ ಇಲ್ಲಿಗೆ ಬರುತ್ತಿದ್ದಾರೆ? ರಾಜ್ಯದ ವಿರುದ್ಧ ಮಾತನಡಲು ಅವರನ್ನು ಕರೆಸ್ಬೇಕಾ? ಸರ್ವಪಕ್ಷಗಳ ಸಭೆಗೆ ನಮಗೂ ಆಹ್ವಾನ ಬಂದಿದೆ. ಈ ವಿಚಾರವಾಗಿ ಸಭೆಯಲ್ಲಿಯೂ ಮಾತನಾಡುತ್ತೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾವೇರಿ ನದಿ ನೀರಿನ ವಿಚಾರವಾಗಿ ನಮಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಇಲ್ಲಿ ಬರಗಾಲವಿದೆ. ಕುಡಿಯುವ ನೀರಿಗೂ ಸಂಕಷ್ಟ ಎದುರಾಗುತ್ತಿದೆ. ಜಲಾಶದಲ್ಲಿ ನೀರು ಖಾಲಿಯಾಗಿ ಬರಿದಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ. ಇದನ್ನು ಪ್ರಾಧಿಕಾರಿದ ಮುಂದೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫವಾಗಿದೆ. ಅದಕ್ಕೆ ಅವರು ತಮಿಳುನಾಡಿಗೆ ನೀರು ಬಿಡಲು ಹೇಳಿದ್ದಾರೆ ಎಂದರು.

ಮೇಕೆದಾಟು ವಿಚಾರವಾಗಿ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಹೀಗಿರುವಾಗ ಇವರಿಗೆ ತಮಿಳುನಾಡಿನ ಒಪ್ಪಿಗೆ ಅವಶ್ಯಕತೆ ಏನಿದೆ? ಸಿಎಂ ವಿಜಯ್ ಇಲ್ಲಿಗೆ ಬಂದು ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಅಂತಾರೆ. ಮೇಕೆದಾಟು ಯೋಜನೆಗೆ ನಮ್ಮ ವಿರೋಧವಿದೆ ಮಾಡಲು ಬಿಡಲ್ಲ ಎಂದು ಹೇಳ್ತಾರೆ. ಪ್ರಧಾನಿಗೆ ಪತ್ರ ಬರೆದಿದ್ದಾಗಿ ಹೇಳ್ತಾಅರೆ. ಅವರ ಬಾಯಲ್ಲಿ ನಮ್ಮ ರಾಜ್ಯಕ್ಕೆ ವಿರುದ್ಧವಾದುದನ್ನು ಕೇಳಲು ಅವರನ್ನು ಇಲ್ಲಿ ಕರೆಸಬೇಕಾ? ವಿಜಯ್ ಇಲ್ಲಿಗೆ ಬರುವ ಅವಶ್ಯಕತೆ ಇಲ್ಲವೇ ಇಲ್ಲ. ಅವರು ಬರುವುದು ಮಾರಕ ಎಂದರು.

ಕಾವೇರಿ ನೀರಿನ ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ ಗಮನವನ್ನೇ ಕೊಟ್ಟಿಲ್ಲ. ಅವರು ಕ್ಯಾಬಿನೇಟ್ ವಿಸ್ತರಣೆ ಯೋಚನೆಯಲ್ಲಿ ದೆಹಲಿಯಲ್ಲಿ ಕುಳಿತಿದ್ದರು. ಇಲ್ಲಿ ಕಾವೇರಿ ನೀರಿಗಾಗಿ ರೈತರು ಹೋರಾಡುತ್ತಿದ್ದರೆ ಇವರು ಸಿಜೆಪಿಗೆ ಬೆಂಬಲ ನೀಡಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಾ ಕಾಲಕಳೆದಿದ್ದಾರೆ. ಬಳಿಕ ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಯಲ್ಲಿ ಕುಳಿತಿದ್ದರು. ಕಾವೇರಿ ನದಿ ನೀರಿನ ವಿಚಾರವಾಗಿ ಮುಖ್ಯಮಂತ್ರಿಗಳು ನಿರ್ಲಕ್ಷ ಮಾಡಿದರು. ಹಾಗಾಗಿ ರಾಜ್ಯದ ಅಧಿಕಾರಿಗಳು ಪ್ರಾಧಿಕಾರದ ಮುಂದೆ ಸಮರ್ಪಕವಾಗಿ ರಾಜ್ಯದ ಪರವಾಗಿ ವಾದಮಂಡನೆ ಮಾಡಲು ಸಾಧ್ಯವಾಗಿಲ್ಲ.
ಅಧಿಕಾರಿಗಳಿಗೆ ಸಿಎಂ ಈ ರೀತಿ ವಾದ ಮಂಡಿಸಬೇಕು. ಕಾವೇರಿ ಒಡಲು ಬರಿದಾಗಿದೆ, ನಮಗೆ ನೀರಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಹೇಳಿಯೇ ಇಲ್ಲ. ಕಾವೇರಿ ವಿಚಾರದಲ್ಲಿ ಕಾನೂನು ಚೌಕಟ್ಟಲ್ಲಿ ಏನು ಹೋರಾಟ ಮಾಡಬೇಕು ಅದನ್ನು ರಾಜ್ಯ ಸರ್ಕಾರ ಮಾಡಿಲ್ಲ. ಹಾಗಾಗಿ ಈ ಆದೇಶ ಬಂದಿದೆ. ಇಂದು ಸಂಕಷ್ಟ ಎದುರಾಗಿದೆ ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular