ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ವಿಚಾರವಾಗಿ ವ್ಯಂಗ್ಯವಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಬಸ್ ಇಂಜಿನ್ ಸೀಜ್ ಆಗಿದೆ ಅಂತ ಗೊತ್ತಾಗಿದ್ದರಿಂದಲೇ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ನೀಡಿದ್ದಾರೆ ಎಂದು ಕಾಲೆಳೆದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ್, ಡಿ.ಕೆ.ಶಿವಕುಮಾರ್ ಅಭಿವೃದ್ಧಿ ಮಾಡಲು ಈಗ ಹಣ ಎಲ್ಲಿದೆ? ಸರ್ಕಾರ ನಡೆಸಲು ಆಗಲ್ಲ ಅಂತ ಗೊತ್ತಾಗಿದ್ರಿಂದ ಸೈಲೆಂಟ್ ಆಗಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ಹಠವಾದಿ, ವೈಲೆಂಟ್ ಸಿದ್ದರಾಮಯ್ಯ ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮಾಡಿರುವ ಸಾಲವನ್ನು ಹೇಗೆ ನಿರ್ವಹಿಸುತ್ತೀರಾ ಡಿ.ಕೆ.ಶಿವಕುಮಾರ್ ಅವರೇ? ಗೃಹಲಕ್ಷ್ಮೀ ಬಾಕಿ ಹಣ 5 ಸಾವಿರ ಕೋಟಿ ಕೊಡದಿದ್ದರೆ ನಾನು ಬಿಡಲ್ಲ. ಯಾವುದೇ ಹೋರಾಟವಾದರೂ ಸರಿ ನಾನು ಇಳಿಯುತ್ತೇನೆ. ಅನ್ನಭಾಗ್ಯ ಯೋಜನೆಯ 700 ಕೋಟಿ ಕೊಡಿಸುಯೇ ತೀರುತ್ತೇನೆ. ಇದನ್ನು ಬಿಜೆಪಿ ಸವಾಲಾಗಿ ತೆಗೆದುಕೊಂಡಿದೆ ಎಂದು ಎಚ್ಚರಿಸಿದರು.

