ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ ದುರಂತಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಯಶವಂತಪುರ ಶಾಸಕ ಸೋಮಶೇಖರ್ ಆರೋಪಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ಅಕ್ರಮ ಕ್ರಷರ್ ನಡೆಸ್ತಿದ್ದಾರೆ. ಗರ್ಭಿಣಿ ಚಿರತೆ ಸತ್ತಾಗಲೇ ಅಕ್ರಮದ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಅಸೆಂಬ್ಲಿಯಲ್ಲಿಯೂ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಕಲ್ಲುಕ್ವಾರಿ ದುರಂತದಲ್ಲಿ 7 ಮಂದಿ ಮೃತಪಟ್ಟಿರುವ ಮಾಹಿತಿ ಇದೆ. ಮೃತರ ಕುಟುಂಬಕ್ಕೆ ಕ್ರಷರ್ ಮಾಲೀಕರಿಂದಲೇ ತಲಾ 1 ಕೋಟಿ ಪರಿಹಾರ ಕೊಡಿಸಬೇಕು ಆಗ್ರಹಿಸಿದರು.
. ಕಲ್ಲು ಕ್ವಾರಿ ದುರಂತದ ಬಗ್ಗೆ ಸಿಎಂ ಡಿ.ಕೆ.ಶಿವಕುಮರ್ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದರು. ಪರಿಹಾರ ಕೊಡುವುದು ಆಮೇಲೆ. ಮುಖ್ಯಮಂತ್ರಿಗಳಿಗೆ ಹೇಳಿದರೆ ಪರಿಹಾರ ಕೊಡುತ್ತಾರೆ, ಆದರೆ ಈ ದುರಂತಕ್ಕೆ ಕಾರಣ ಕರ್ತರು ಯಾರು ಅವರುಗೆ ಶಿಕ್ಷೆ ಕೊಡದೇ ಹೋದರೆ ಮುಂದೆ ಇಂತಹ ಅನಾಹುತಗಳು ಮುಂದುವರೆಯುತ್ತವೆ. ಈಗಾಗಿರುವ ಅನಾಹುತಕ್ಕೆ ಕ್ವಾರಿ ಮಾಲೀಕನನ್ನು ಮೊದಲು ಬಂಧಿಸಬೇಕು. ಅವರು ಈಗಾಗಲೇ ಕೋಟ್ಯಂತರ ರೂಪಾಯಿ ದುಡಿದಿದ್ದಾರೆ. ಅವರು ಮೃತರ ಕಾರ್ಮಿಕ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಿ. ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದರು.
ಮಾಲೀಕರೇ ದುರಂತದ ಹೊಣೆ ಹೊತ್ತುಕೊಳ್ಳಬೇಕು. 24ಗಂಟೆಯೊಳಗೆ ಮಾಲೀಕರನ್ನು ಬಂಧಿಸಿ, ಅವರಿಂದಲೇ 1 ಕೋಟಿ ಪರಿಹಾರ ಕೊಡಿಸಬೇಕು. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ವಿರುದ್ಧ ಕಠಿಣ ಕ್ರಮವಾಗದಿದ್ದರೆ ಮುಂದೆಯೂ ಇಂತಹ ಘಟನೆಗಳು ಮರುಕಳಿಸುತ್ತವೆ. ಪ್ರಕರಣ ಮುಚ್ಚಿ ಹಾಕುತ್ತಿರುತ್ತಾರೆ. ಹಾಗಾಗಬಾರದು. ತಕ್ಷಣ ಮಾಲೀಕನನ್ನು ಬಂಧಿಸಿ ಕ್ರಮ ಕೈಗೊಳ್ಳಲಿ ಎಂದರು.

