HomeKarnatakaಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬರೋಬ್ಬರಿ 3.48 ಕೋಟಿ ರೂಪಾಯಿ ಗುಳುಂ ಆರೋಪ; ಸಚಿವ ಸತೀಶ್...

ಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬರೋಬ್ಬರಿ 3.48 ಕೋಟಿ ರೂಪಾಯಿ ಗುಳುಂ ಆರೋಪ; ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಲೂಟಿ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ನಕಲಿ ವರ್ಕ್ ಡನ್ ಬಳಸಿ ಬರೋಬ್ಬರಿ 3.48 ಕೋಟಿ ಲೂಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ಇಲಾಖೆಯಿಂದ ಫೈಲ್ ಅಪ್ರೂವ್ ಆಗಿ ಬಂದಿದ್ದಕ್ಕೆ ಕಾಮಗಾರಿ ನಡೆಸಲಾಗಿದೆ. ರಾಯಚೂರು ಲೋಕೋಪಯೋಗಿ ಇಲಾಖೆ ಇಇ ವೆಂಕಟೇಶ್ ಗಲಗ ವಿರುದ್ಧ ಆರ‍ೋಪ ಕೇಳಿಬಂದಿದೆ. ಆದರೆ ವೆಂಕಟೇಶ್ ಗಲಗ ಈ ಆರೋಪ ನಿರಾಕರಿಸಿದ್ದಾರೆ. ಅಂತಹ ಯಾವುದೇ ಬ್ರಷ್ಟಾಚಾರ ನಡೆದಿಲ್ಲ. ಲೋಕೋಪಯ್ಗಿ ಇಲಾಖೆಯಿಂದ ಯಾವುದೇ ಹಣ ಸಂದಾಯವಾಗಿಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಟೆಂದರ್ ಆಗಿದ್ದು ಒಬ್ಬರಿಗೆ. ಆದರೆ ಕಾಮಗಾರಿಯ ನಕಲಿ ಟೆಂಡರ್ ಪಡೆದು ಭ್ರಷ್ಟಾಚಾರ ನಡೆಸಲಾಗಿದೆ. ಅಮ್ಮಾಪುರ ಮತ್ತು ಕಂಪನಿ ಹೆಸರಿಗೆ ಟೆಂಡರ್ ಆಗಿತ್ತು. ಆದರೆ ಭೀಮಾಶಂಕರ್ ಹೆಸರಲ್ಲಿ ನಕಲಿ ಟೆಂಡರ್ ಮೂಲಕ ವರ್ಕ್ ಡನ್ ಸೃಷ್ಟಿಸಿ ಮಸ್ಕಿಯಿಂದ ಲಿಂಗಸಗೂರು ರಸ್ತೆ ಕಾಮಗಾರಿ ಬಿಲ್ ಹೆಸರಲ್ಲಿ ಕೋಟಿ ಕೋಟಿ ಹಣ ಪಡೆಯಲಾಗಿದೆ. ನಯಾಪೈಸೆ ಕೆಲಸ ಮಾಡದಿದ್ದರೂ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular